ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ವಹಿಸಲು ಅವರ ಕಚೇರಿ ತಿಂಗಳಿಗೆ ಸುಮಾರು 54 ಲಕ್ಷ ರೂ.ಗಳನ್ನು ಖರ್ಚು ಮಾಡುತ್ತಿದೆ ಎಂದು ಆರ್ಟಿಐ ಉತ್ತರದಿಂದ ತಿಳಿದುಬಂದಿದೆ.
ಆರ್ ಟಿಐ ಕಾರ್ಯಕರ್ತ ಮರಿಲಿಂಗಗೌಡ ಮಾಲಿ ಪಾಟೀಲ್ ಅವರು ಮಾಧ್ಯಮಗಗಳ ಜೊತೆಗೆ ಮಾತನಾಡಿದ್ದು, ಇದೇ ವೇಳೆ ಅವರು ‘ಅನುದಾನದ ಕೊರತೆಯಿಂದಾಗಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿರುವ ಸಂದರ್ಭದಲ್ಲಿ ಮತ್ತು ವಿವಿಧ ಇಲಾಖೆಗಳಲ್ಲಿನ ಕಾಮಗಾರಿಗಳಿಗೆ ಗುತ್ತಿಗೆದಾರರಿಗೆ ಪಾವತಿಸಲು ಕಾಂಗ್ರೆಸ್ ಸರ್ಕಾರ ಹೆಣಗಾಡುತ್ತಿರುವ ಸಮಯದಲ್ಲಿ ಸಿಎಂ ಹೀಗೆ ಮಾಡಿರುವುದು ಸರಿಯ ಅಲ್ಲ ಅಂಥ ಹೇಳಿದ್ದಾರೆ. ಸಿದ್ದರಾಮಯ್ಯ ಅವರ ಸಾಮಾಜಿಕ ಮಾಧ್ಯಮ ವೆಚ್ಚವನ್ನು ಅಧಿಕಾರಿಗಳು ದೃಢಪಡಿಸಿದ್ದು, ಹಿಂದಿನ ಮುಖ್ಯಮಂತ್ರಿಗಳು ಈ ರೀತಿ ತಿಂಗಳಿಗೆ ಖರ್ಚು ಮಾಡಿದ ತಿಂಗಳಿಗೆ 2 ಕೋಟಿ ರೂ.ಗಿಂತ ಕಡಿಮೆ ಇದೇ ಎನ್ನಲಾಗಿದೆ.
ಕರ್ನಾಟಕ ರಾಜ್ಯ ಮಾರ್ಕೆಟಿಂಗ್ ಕಮ್ಯುನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ (ಎಂಸಿಎ) ನಿಂದ ಪಾಟೀಲ್ ಅವರಿಗೆ ನೀಡಿದ ಉತ್ತರದ ಪ್ರಕಾರ, ಸಿಎಂ ಕಚೇರಿಯಿಂದ ಕಳೆದ ವರ್ಷ ಅಕ್ಟೋಬರ್ 25 ರಿಂದ ಮಾರ್ಚ್ 2024 ರವರೆಗೆ ಸುಮಾರು 3 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. 18% ಜಿಎಸ್ಟಿ ಸೇರಿದಂತೆ ಸಿಎಂಒ ಪ್ರತಿ ತಿಂಗಳು ಸುಮಾರು 53.9 ಲಕ್ಷ ರೂ.ಗಳನ್ನು ಪಾವತಿಸಿದೆ ಎಂದು ಮಾಹಿತಿಯಲ್ಲಿ ಬಹಿರಂಗಾಗಿದೆ. ಸುಮಾರು 35 ಜನರ ತಂಡದೊಂದಿಗೆ ಸಿದ್ದರಾಮಯ್ಯ ಅವರ ಖಾತೆಗಳನ್ನು ನಿರ್ವಹಿಸುವ ದಿ ಪಾಲಿಸಿ ಫ್ರಂಟ್ ಕಂಪನಿಗೆ ಪಾವತಿ ಮಾಡಲಾಗಿದೆ.