ಚಿಕ್ಕಮಗಳೂರು: ಓವರ್ಡೋಸ್ನಿಂದ ಮಗು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನ ಅಜ್ಜಂಪುರದಲ್ಲಿ ನಡೆದಿದೆ. ಮೃತ ಬಾಲಕನನ್ನು ಸೋನೆಶ್ ಅಂತ ತಿಳಿದು ಬಂದಿದೆ.
ಅಜ್ಜಂಪುರದಲ್ಲಿ ವೈದ್ಯನಾಗಿ ಕ್ಲಿನಿಕ್ ಇಟ್ಟುಕೊಂಡಿದ್ದ ವರುಣ್ ಎನ್ನುವವರು ಬಾಲಕನಿಗೆ ಚುಚ್ಚುಮದ್ದು ನೀಡಿದ್ದ ಎನ್ನಲಾಗಿದೆ. ಕೂಡಲೇ ಬಾಲಕನ ಮೈ ನಲ್ಲಿ ಬೊಬ್ಬೆಗಳು ಬರಲು ಶುರುವಾಗಿದ್ದಾವೆ ಎನ್ನಲಾಗಿದೆ. ಈ ನಡುವೆ ಹೆಚ್ಚಿನ ಚಿಕಿತ್ಸೆಗಾಗಿ ಮಗುವಿನ ಪಾಲಕರು ಶಿವಮೊಗ್ಗದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಆದರೆ ಅಲ್ಲಿ ಮಗು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ ಎನ್ನಲಾಗಿದೆ. ಇನ್ನೂ ವೈದ್ಯ ಬಿಎಂಎಸ್ ಪದವಿ ಪಡೆದುಕೊಂಡಿದ್ದು, ನಿಯಮ ಮೀರಿ ಚಿಕಿತ್ಸೆ ನೀಡಿದ್ದ ಎನ್ನಲಾಗಿದೆ. ಸದ್ಯ ವೈದ್ಯ ವರುಣ್ ವಿರುದ್ದ ಪೊಲೀಸರು ದೂರು ದಾಖಲು ಮಾಡಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.