Monday, December 23, 2024
Homeಕರ್ನಾಟಕಕೊಡಗು: ಆಧಾರ್ ಕಾರ್ಡ್ ನೋಂದಣಿ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ…!

ಕೊಡಗು: ಆಧಾರ್ ಕಾರ್ಡ್ ನೋಂದಣಿ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ…!

ಕೊಡಗು: ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ನವದೆಹಲಿ ಅವರು ಪ್ರಧಾನಮಂತ್ರಿ ಜನಜಾತಿಯ ಆದಿವಾಸಿ ನ್ಯಾಯ ಮಹಾ ಯೋಜನೆಯಡಿ (ಪಿಎಂ-ಜನಮನ್) ಕಾರ್ಯಕ್ರಮಗಳನ್ನು ಪಿವಿಟಿಜಿ ಸಮುದಾಯವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಪ್ರಯೋಜನ ಪಡೆಯಲು ದೇಶದಾದ್ಯಂತ ಪಿಎಂ-ಜನ್‍ಮನ್ ಫೇಸ್-2 ಕಾರ್ಯಕ್ರಮದಡಿ ಅರಿವು ಮೂಡಿಸುವ ಶಿಬಿರ/ಫಲಾನುಭವಿಗಳ ಸ್ಯಾಚುರೇಷನ್ ಕ್ಯಾಂಪ್‍ಗಳನ್ನು ಸೆಪ್ಟೆಂಬರ್, 10 ರವರೆಗೆ ವಿಸ್ತರಿಸಲಾಗಿದೆ.

ಕೊಡಗು ಜಿಲ್ಲೆಯಲ್ಲಿ 134 ಹಾಡಿಗಳಲ್ಲಿ ಅಂದಾಜು 9,054 ಬುಡಕಟ್ಟು ಸಮುದಾಯವಾದ ಜೇನುಕುರುಬ ಸಮುದಾಯದವರು ವಾಸಿಸುತ್ತಿದ್ದು, ಇವರ ಅನುಕೂಲಕ್ಕಾಗಿ ಪಿಎಂ-ಜನ್‍ಮನ್ ಫೇಸ್-2 ರಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲ್ಲೂಕು/ಬ್ಲಾಕ್ ನೋಡೆಲ್ ಅಧಿಕಾರಿಗಳ ತಂಡವನ್ನು ರಚನೆ ಮಾಡಲಾಗಿದೆ.

ಸೆಪ್ಟೆಂಬರ್, 10 ರವರೆಗೆ ಜೇನುಕುರುಬ ಜನಾಂಗದವರಿಗೆ ಕಂದಾಯ ಇಲಾಖೆ, ಲೀಡ್ ಬ್ಯಾಂಕ್, ಆರೋಗ್ಯ ಇಲಾಖೆ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗಳ ವತಿಯಿಂದ ಆಧಾರ್ ಕಾರ್ಡ್ ನೋಂದಣಿ, ಪಿ.ಎಂ ಜನ್‍ಧನ್ ಬ್ಯಾಂಕ್ ಖಾತೆ, ಆಯುಷ್ಮಾನ್ ಭಾರತ್ ಕಾರ್ಡ್, ಸಿಕೆಲ್ ಸೆಲ್ ಅನೆಮಿಯಾ ಖಾಯಿಲೆ ಸ್ಕ್ರೀನಿಂಗ್ ಪರೀಕ್ಷೆ, ಜಾತಿ ಪ್ರಮಾಣ ಪತ್ರ, ಪಡಿತರ ಚೀಟಿ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ಜೇನುಕುರುಬ ಜನಾಂಗದವರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವುದು.
ಹೆಚ್ಚಿನ ಮಾಹಿತಿಗೆ ಯೋಜನಾ ಸಮನ್ವಯಾಧಿಕಾರಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಕೊಡಗು ಜಿಲ್ಲೆ ಇವರ ಕಚೇರಿ ದೂರವಾಣಿ ಸಂಖ್ಯೆ:08272-200500, ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ವಿರಾಜಪೇಟೆ ತಾಲ್ಲೂಕು (9901482763) ಹಾಗೂ ಸಹಾಯಕ ನಿರ್ದೇಶಕರು (ಗ್ರೇಡ್-2), ಸಮಾಜ ಕಲ್ಯಾಣ ಇಲಾಖೆ, ಸೋಮವಾರಪೇಟೆ ತಾಲ್ಲೂಕು (7259552655) ಅವರನ್ನು ಸಂಪರ್ಕಿಸಬಹುದು ಎಂದು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ಎಸ್.ಹೊನ್ನೆಗೌಡ ಅವರು ತಿಳಿಸಿದ್ದಾರೆ.

RELATED ARTICLES

Most Popular