ಬೆಂಗಳೂರು: ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿರುವ ಮಾತೊಂದು ಈಗ ವಿವಾದಕ್ಕೆ ಕಾರಣವಾಗಿದೆ. ಅವರು ಸಂಸ್ಕೃತ ಭಾಷೆ ಗೊತ್ತಿಲ್ಲದಿದ್ದರೆ ಸ್ವರ್ಗಕ್ಕೆ ವೀಸಾ ಸಿಗೋದು ಇಲ್ಲ ಹೇಳಿರುವುದು ಈಗ ಹಲವರ ಕಣ್ಣು ಕೆಂಪು ಮಾಡಿದೆ.
ಸ್ವರ್ಗಕ್ಕೆ ಹೋಗಲು ಆಸೆ ಪಡುವವರು ರು ಸಂಸ್ಕೃತ ಭಾಷೆಯನ್ನು ಕಲಿಯಬೇಕು ಅಂಥ ಪುತ್ತಿಗೆ ಮಠದ ಶ್ರೀ ಹೇಳಿದ್ದಾರೆ.ಇನ್ನೂ ಶ್ರೀಗಳ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಸದ್ಯ ಸ್ವಾಮೀಜಿಗಳ ಈ ಹೇಳಿಕೆಯು ವಿವಾದಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಇದೇ ವೇಳೆ ಅವರು ವಿಶ್ವಭಾಷೆ, ದೇವಭಾಷೆಯಾಗಿದೆ. ಎಲ್ಲ ಭಾಷೆಗಳ ಮೂಲ ಮತ್ತು ಜನನಿ ಸಂಸ್ಕೃತ ಮೂಲವಾಗಿದ್ದು, ಸಂಸ್ಕೃತ ಸರಳ, ಸುಂದರ ಮತ್ತು ಸುಲಭ ಭಾಷೆಯಾಗಿರುವುದು ಮಾತ್ರವಲ್ಲದೇಱ ಇದು ಕೇವಲ ಭಾರತೀಯ ಭಾಷೆಗಳ ಮೂಲವಲ್ಲದೇ ಆಂಗ್ಲ ಭಾಷೆಯ ಮೂಲವೂ ಆಗಿದೆ ಅಂತ ಅವರು ಹೇಳಿದ್ದಾರೆ.
ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕೇರಳ ರಾಜ್ಯಪಾಲ ಮೊಹಮ್ಮದ್ ಆರೀಫ್ ಖಾನ್ ನಮ್ಮ ಧರ್ಮ ಬೇರೆ ಬೇರೆ ಆಗಿರಬಹುದು. ಆದರೆ ನಾವೆಲ್ಲರೂ ಭಾರತೀಯರು. ನಮ್ಮ ಸಂಸ್ಕೃತಿ ಮತ್ತು ಹಿರಿಮೆ ಒಂದೇ. ನಾವೆಲ್ಲರೂ ಬೇರೆ ಬೇರೆ ದೇವರನ್ನು ಪೂಜಿಸಿದರೂ ನಮ್ಮೆಲ್ಲರ ಪ್ರಾರ್ಥನೆ ಕೊನೆಗೆ ಶ್ರೀಕೃಷ್ಣನಿಗೆ ಸಲ್ಲುವುದು ಅಂಥ ತಿಳಿಸಿದರು.ಇದಲ್ಲದೇ ದೇವರಿಗೆ ಯಾವ ಭಾಷೆಯಲ್ಲಿ ಪ್ರಾರ್ಥನೆ ಮಾಡುತ್ತೇವೆ ಎನ್ನುವುದಕ್ಕಿಂತ ಯಾವ ಭಾವದಲ್ಲಿ ಪ್ರಾರ್ಥನೆ ಸಲ್ಲಿಸುತ್ತೇವೆ ಎನ್ನುವುದು ಮುಖ್ಯವಾಗುತ್ತದೆ ಅಂತ ತಿಳಿಸಿದರು.