ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು ಅಧಿಸೂಚಿಸಲಾದ ಸಹಕಾರ ಇಲಾಖೆಯ, ಸಹಕಾರ ಸಂಘಗಳ ನಿರೀಕ್ಷಕರು 53 (ಹೈ.ಕ.ವೃಂದ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಅಕ್ಟೋಬರ್ 16 ರಂದು ಆಯೋಗದ ಅಂತರ್ಜಾಲ http://kpsc.kar.nic.in ನಲ್ಲಿ ಪ್ರಕಟಿಸಲಾಗಿದೆ.
ತಾತ್ಕಾಲಿಕ ಆಯ್ಕೆಪಟ್ಟಿಗೆ ಸಂಬಂಧಿಸಿದಂತೆ ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ, ಆಯ್ಕೆಪಟ್ಟಿ ಪ್ರಕಟಿಸಿದ ದಿನಾಂಕದಿಂದ 07 ದಿನಗಳ ಒಳಗಾಗಿ ‘ಕಾರ್ಯದರ್ಶಿ, ಕರ್ನಾಟಕ ಲೋಕ ಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು-01’ ಇವರಿಗೆ ಲಿಖಿತವಾಗಿ ಆಕ್ಷೇಪಣೆ ಸಲಿಸಬಹುದಾಗಿರುತ್ತದೆ. 07 ದಿನಗಳ ನಂತರ ಸಲ್ಲಿಸುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳು ಈಗಾಗಲೇ ಬೇರೆ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ಹುದ್ದೆಗೆ ಆಯ್ಕೆಯಾಗಲು ಇಚ್ಛಿಸದಿದ್ದಲ್ಲಿ, ಈ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಪ್ರಕಟಿಸಿದ 10 ದಿನಗಳೊಳಗೆ ಅಂದರೆ ಅಕ್ಟೋಬರ್ 26 ರ ಒಳಗಾಗಿ ಆಯೋಗಕ್ಕೆ ಖುದ್ದು ಹಾಜರಾಗಿ ಸ್ವ ಇಚ್ಛಾ ಹೇಳಿಕೆಯನ್ನು ದಾಖಲಿಸುವಂತೆ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಡಾ.ರಾಕೇಶ್ ಕುಮಾರ್.ಕೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.