Monday, December 23, 2024
Homeಕರ್ನಾಟಕಸ್ವಯಂಸೇವಕ ಗೃಹರಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ

ಸ್ವಯಂಸೇವಕ ಗೃಹರಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ

ಗೃಹ ರಕ್ಷಕ ದಳವು ಒಂದು ಸ್ವಯಂ ಸೇವಾ ಸಂಸ್ಥೆಯಾಗಿದ್ದು, ಬೆಂಗಳೂರು ಉತ್ತರ ಜಿಲ್ಲೆಯ ಗೃಹರಕ್ಷಕದಳ ಇಲ್ಲಿ ಖಾಲಿಯಿರುವ ಸ್ವಯಂ ಸೇವಾ ಗೃಹ ರಕ್ಷಕದಳ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಬೆಂಗಳೂರು: ಗೃಹ ರಕ್ಷಕ ದಳವು ಒಂದು ಸ್ವಯಂ ಸೇವಾ ಸಂಸ್ಥೆಯಾಗಿದ್ದು, ಬೆಂಗಳೂರು ಉತ್ತರ ಜಿಲ್ಲೆಯ ಗೃಹರಕ್ಷಕದಳ ಇಲ್ಲಿ ಖಾಲಿಯಿರುವ ಸ್ವಯಂ ಸೇವಾ ಗೃಹ ರಕ್ಷಕದಳ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಬೆಂಗಳೂರು ಉತ್ತರ ವ್ಯಾಪ್ತಿಯಲ್ಲಿ 21 ಘಟಕಗಳಿದ್ದು, ಹೊಸದಾಗಿ ತಲಘಟ್ಟಪುರ ಘಟಕ ಮತ್ತು ವಿದ್ಯಾರಣ್ಯಪುರ ಘಟಕಗಳು ಸೇರ್ಪಡೆಯಾಗಿವೆ. ಉಳಿದ 18 ಘಟಕಗಳಾದ ಕೆಂಗೇರಿ, ಜ್ಞಾನಬಾರತಿ, ಆರ್.ಆರ್.ನಗರ, ಸುಂಕದಕಟ್ಟೆ, ವಿಜಯನಗರ, ಬಸವೇಶ್ವರನಗರ, ಬಾಪೂಜಿನಗರ, ಬಿನ್ನಿ, ಜೆಜೆ.ನಗರ, ರಾಜಾಜಿನಗರ, ಮಲ್ಲೇಶ್ವರಂ, ನಂದಿನಿ ಲೇಔಟ್, ಯಶವಂತಪುರ, ಹೆಬ್ಬಾಳ, ಹೆಚ್.ಎಂ.ಟಿ. ಪೀಣ್ಯ, ಬಿ.ಇ.ಎಲ್. ಯಲಹಂಕ ಘಟಗಳಿಗೂ ಅರ್ಜಿಗಳನ್ನು ವಿತರಿಸಲಾಗುವುದು. ಅರ್ಜಿಗಳನ್ನು ಸಮಾದೇಷ್ಟರ ಕಚೇರಿ, ಗೃಹರಕ್ಷಕದಳ, ಬೆಂಗಳೂರು ಉತ್ತರ ಜಿಲ್ಲೆ, ವೆಸ್ಟ್ ಆಪ್ ಕಾರ್ಡ್ ರಸ್ತೆ, ಅಗ್ನಿಶಾಮಕ ಠಾಣೆ ಪಕ್ಕ, ರಾಜಾಜಿನಗರ ಕಚೇರಿಯಲ್ಲಿ ಅಕ್ಟೋಬರ್ 18 ರಿಂದ ನವೆಂಬರ್ 16 ರವರೆಗೆ ಮಧ್ಯಾಹ್ನ 2.30 ರಿಂದ ಸಂಜೆ 5.30 ರವರೆಗೆ ಉಚಿತವಾಗಿ ವಿತರಿಸಲಾಗುವುದು. ಅರ್ಜಿಯನ್ನು ಪಡೆಯುವ ಸಂದರ್ಭದಲ್ಲಿ ಜನ್ಮ ದಿನಾಂಕವುಳ್ಳ ಶಾಲೆಯ ಒರಿಜಿನಲ್ ಟಿಸಿ ಅಥವಾ ಒರಿಜಿನಲ್ ಅಂಕಪಟ್ಟಿಯನ್ನು ತರುವುದು.

ಅಭ್ಯರ್ಥಿಗಳಿಗೆ 19 ವರ್ಷ ವಯಸ್ಸು ತುಂಬಿರಬೇಕು, 10 ನೇ ತರಗತಿ ಉತ್ತೀರ್ಣವಾಗಿರಬೇಕು. ದೈಹಿಕವಾಗಿ ದೃಢಕಾಯವಾಗಿರಬೇಕು ಯಾವುದೇ ನ್ಯೂನತೆ ಇರಬಾರದು. ಕನ್ನಡ ಮತ್ತು ಇಂಗ್ಲೀಷ್ ಕಂಪ್ಯೂಟರ್ ಟೈಪಿಂಗ್, ಡ್ರೈವರ್ಸ್, ಅಡುಗೆ ಭಟ್ಟರು, ಕಾರ್ಪೆಂಟರ್, ಎಲೆಕ್ಟ್ರಿಷಿಯನ್, ಪೈಂಟರ್ ಮತ್ತು ಫ್ಲಂಬರ್ ಕೌಶಲ್ಯಗಳನ್ನು ಹೊಂದಿರಬೇಕು.

ಗೃಹರಕ್ಷಕದಳ ಸಂಸ್ಥೆಯಲ್ಲಿ 3 ವರ್ಷಗಳ ಅವಧಿಗೆ ಮಾತ್ರ ಸೇವೆ ಸಲ್ಲಿಸಬಹುದಾಗಿರುತ್ತದೆ. ಇದು ಖಾಯಂ ನೌಕರಿಯಾಗಿರುವುದಿಲ್ಲ. ಯಾವುದೇ ರೀತಿಯ ಮಾಸಿಕ ಸಂಬಳ / ವಿಶೇಷ ಭತ್ಯೆಗಳನ್ನು ನೀಡುವುದಿಲ್ಲ. ಸರ್ಕಾರವು ನಿಗಧಿಪಡಿಸಿರುವ ಗೌರವಧನವನ್ನು ಕರ್ತವ್ಯ ನಿರ್ವಹಿಸುವ ಅವಧಿಗೆ ಮಾತ್ರ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08023142542 ಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ಉತ್ತರ ಜಿಲ್ಲೆಯ ಗೃಹರಕ್ಷಕದಳದ ಕಮಾಂಡೆಂಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

RELATED ARTICLES

Most Popular