ಬೆಂಗಳೂರು: ಸೈಬರ್ ವಂಚಕರು ಈಗ ಹೊಸ ಹೊಸ ರೀತಿಯಲ್ಲಿ ಮೋಸ ಮಾಡುವುದುಕ್ಕೆ ಮುಂದಾಗಿದ್ದಾರೆ. ಈ ನಡುವೆ ಬೆಳಗಾವಿಯಲ್ಲಿ ಹೊಸ ದಂದೆಯನ್ನು ಸೈಬರ್ ವಂಚಕರು ಶುರು ಮಾಡಿದ್ದು, ಗರ್ಭಿಣಿ ಮತ್ತು ಬಾಣಂತಿಯರರಿಗೆ ಕರೆ ಮಾಡುತ್ತಿದ್ದು, ಸರ್ಕಾರದಿಂದ ನಿಮಗೆ ಹಣ ಬಂದಿದ್ದು, ನಾವು ಕಳುಹಿಸುವ ಲಿಂಕ್ ಅನ್ನು ಕ್ಲಿಕ್ ಮಾಡಿ ಅಂತ ಹೇಳಿ ಮಹಿಳೆಯರ ಖಾತೆಯಲ್ಲಿರುವ ಹಣವನ್ನು ಬರಿದು ಮಾಡುತ್ತಿರುವ ಘಟನೆ ನಡೆದಿದೆ.
ಸದ್ಯಕ್ಕೆ 85 ಸಾವಿರಕ್ಕೂ ಹೆಚ್ಚು ರೂಗಳ ಹಣವನ್ನು ಕಳುವು ಮಾಡಿದ್ದಾರೆ ಎನ್ನಲಾಗಿದೆ. ಆರಂಭದಲ್ಲಿ ಮಹಿಳೆಯರಿಗೆ ಕರೆ ಮಾಡುವ ಸೈಬರ್ ಕಳ್ಳರು, ನಿಮಗೆ ಕಳುಹಿಸುರವ ಲಿಂಕ್ ಮೇಲೆ ಕ್ಲಿಕ್ ಮಾಡುವಂತೆ ಹೇಳುತ್ತಾರೆ, ಇದನ್ನೇ ನಂಬುವ ಮಹಿಳೆಯರು ಲಿಂಕ್ ಮೇಲೆ ಕ್ಲಿಕ್ ಮಾಡಿ ಅವರ ಖಾತೆಯಲ್ಲಿರುವ ಹಣವನ್ನು ದೋಚುತ್ತಿದ್ದಾರೆ.
ಇನ್ನೂ ಈ ಬಗ್ಗೆ ಪೊಲೀಸರು ಜನತೆ ಬಳಿ ಮನವಿ ಮಾಡಿಕೊಂಡಿದ್ದು, ಇಂತಹ ವಂಚನೆಗೆ ಒಳಗಾಗಬೇಡಿ. ಕೂಡಲೇ ನಿಮಗೆ ಬರುವ ಅನುಮಾನಸ್ಪದ ಕರೆಗಳ ಬಗ್ಗೆ ಹತ್ತಿರದ ಪೊಲೀಸ್ ಠಾಣೆಗೆ ಕರೆ ಮಾಡಿ ದೂರು ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಇನ್ನೂ ದಿನದಿಂದ ದಿನಕ್ಕೆ ಸೈಬರ್ ಕಳ್ಳರು ಹೊಸ ಹೊಸ ಮಾರ್ಗಗಳನ್ನು ಹುಡುಕಿಕೊಳ್ಳುತ್ತಿದ್ದು, ಆಮಿಶಗಳು, ಗಿಫ್ಟ್ಗಳ ಹೆಸರಿನಲ್ಲಿ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ದೋಚುತ್ತಿರುವುದನ್ನು ನಾವು ನೋಡಬಹುದಾಗಿದೆ. ಹೀಗಾಗಿ ಯಾವುದೇ ಹಣದ ಲಿಂಕ್ ಬಂದರೆ ಅದನ್ನು ಕ್ಲಿಕ್ ಮಾಡದೇ ಇರುವುದು ಒಳಿತು. ಇದಲ್ಲದೇ ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಅನುಮಾಸ್ಪದ ಹಣದ ವಹಿವಾಟು ನಡೆದಿದ್ದರೆ. ಕೂಡಲೇ ಸಂಬಂಧಪಟ್ಟ ಬ್ಯಾಂಕ್ಗೆ ಮತ್ತು ಪೊಲೀಸ್ ಠಾಣೆಗೆ ದೂರು ನೀಡಿದರೆ, ನಿಮ್ಮ ಹಣವನ್ನು ನಿಮ್ಮ ಖಾತೆಯಲ್ಲಿ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.