Monday, December 23, 2024
Homeಕರ್ನಾಟಕಇನ್ಮುಂದೆ ತಳ್ಳುಗಾಡಿಗಳಲ್ಲಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ವ್ಯಾಪಾರಿಗಳ ನೊಂದಣಿ ಕಡ್ಡಾಯ…!

ಇನ್ಮುಂದೆ ತಳ್ಳುಗಾಡಿಗಳಲ್ಲಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ವ್ಯಾಪಾರಿಗಳ ನೊಂದಣಿ ಕಡ್ಡಾಯ…!

ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯನ್ವಯ ತಳ್ಳುಗಾಡಿಗಳಲ್ಲಿ (Movable carts) ಪ್ಯಾಕ್ ಮಾಡಿದ ಅಥವಾ ಸಿದ್ಧಪಡಿಸಿದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ವ್ಯಾಪಾರಿಗಳೂ ಸಹ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ನೊಂದಣಿ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.

ಹಾಲಿ ವರ್ಷಕ್ಕೆ ರೂ.100/-ಗಳ ಶುಲ್ಕದಂತೆ ಆಹಾರ ಉದ್ದಿಮೆದಾರರ ನೊಂದಣಿಯನ್ನು 1 ರಿಂದ 5 ವರ್ಷಗಳ ಅವಧಿಗೆ ನೊಂದಣಿ ಮಾಡಲಾಗುತ್ತಿತ್ತು. ಸಂಬಂಧಿಸಿದಂತೆ ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ನಿರ್ದೇಶಕರು ರವರು ಹೊರಡಿಸಿರುವ ಆದೇಶದಂತೆ ಸೆಪ್ಟೆಂಬರ್ 28ರಿಂದ ತಳ್ಳುಗಾಡಿಗಳಲ್ಲಿ ಪ್ಯಾಕ್ ಮಾಡಿದ ಅಥವಾ ಸಿದ್ದಪಡಿಸಿದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ವ್ಯಾಪಾರಿಗಳಿಗೆ ನೊಂದಣಿಗಾಗಿ ವಿಧಿಸಲಾಗುತ್ತಿದ್ದ ವರ್ಷಕ್ಕೆ ರೂ.100/-ಗಳ ಶುಲ್ಕವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗಿದ್ದು, ವ್ಯಾಪಾರಿಗಳು ಒಮ್ಮೆಗೆ 5 ವರ್ಷಗಳ ಅವಧಿಗೆ ನೊಂದಣಿಯನ್ನು ಪಡೆಯಲು ಅವಕಾಶವನ್ನು ಮಾಡಿಕೊಡಲಾಗಿರುತ್ತದೆ.

ತಳ್ಳುಗಾಡಿಗಳಲ್ಲಿ ಪ್ಯಾಕ್ ಮಾಡಿದ ಅಥವಾ ಸಿದ್ಧಪಡಿಸಿದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ವ್ಯಾಪಾರಿಗಳು ಹಾಗೂ ಸಂಬಂಧಪಟ್ಟ ವರ್ಗದ ಎಲ್ಲಾ ವ್ಯಾಪಾರಿಗಳು ಯಾವುದೇ ಶುಲ್ಕವಿಲ್ಲದೇ ನೊಂದಣಿಯನ್ನು ಮಾಡಿಸಿಕೊಳ್ಳಲು ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

Most Popular