Monday, December 23, 2024
Homeಕರ್ನಾಟಕBreaking: ಇನ್ನೇರಡು ತಿಂಗಳಿನಲ್ಲಿ KPSC 'ಮರು ಪರೀಕ್ಷೆ' ನಡೆಸುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ…!

Breaking: ಇನ್ನೇರಡು ತಿಂಗಳಿನಲ್ಲಿ KPSC ‘ಮರು ಪರೀಕ್ಷೆ’ ನಡೆಸುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ…!

ಬೆಂಗಳೂರು: ಇನ್ನೇರಡು ತಿಂಗಳಿನಲ್ಲಿ KPSC ‘ಮರು ಪರೀಕ್ಷೆ’ ನಡೆಸುವಂತೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗವು 384 ಗೆಜೆಟೆಡ್‌ ‍ಪ್ರೊಬೇಷನರಿ ಹುದ್ದೆಗಳ ನೇಮಕಾತಿಗಾಗಿ ಮಂಗಳವಾರ ನಡೆಸಿದ್ದ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆಯ ಪ್ರಶ್ನೆಗಳನ್ನು ಬೇಕಾಬಿಟ್ಟಿಯಾಗಿ ಭಾಷಾಂತರ ಮಾಡಿತ್ತು ಎನ್ನಲಾಗಿದೆ. ಇದು ಅಭ್ಯರ್ಥಿಗಳಿಗೆ ಅನ್ಯಾಯ ಕೂಡ ಮಾಡಲಾಗಿತ್ತು ಅಂಥ ಹಲವು ಮಂದಿ ಕೆಪಿಎಸ್‌ಸಿ ವಿರುದ್ದ ಕಿಡಿಕಾರಿದ್ದರು.

ಇದಲ್ಲದೇ ಸಾವಿರಾರು ಮಂದಿ ಕೆ.ಪಿಎಸ್‌ಸಿ ವಿರುದ್ದ ಮತ್ತು ಸರ್ಕಾರದ ವಿರುದ್ದ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ. ತಮಗೆ ಆಗಿರುವ ಅನ್ಯಾಯಾಯವನ್ನು ಸರಿಪಡಿಸುವಂತೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಮಾಹಿತಿ ನೀಡಿದ್ದ ಅಧಿಕಾರಿಗಳು ಪ್ರಶ್ನೆಗಳನ್ನು ಸರಿಯಾಗಿ ಸಿದ್ದಪಡಿಸಲಾಗಿದ್ದು. ಯಾವುದೇ ಅಚಾತಾರ್ಯವಾಗಿಲ್ಲ ತಮ್ಮ ವಿರುದ್ದ ಕೇಳಿ ಬಂದಿದ್ದ ಆರೋಪಕ್ಕೆ ತಿಪ್ಪೆ ಸಾರುವುದಕ್ಕೆ ಮುಂದಾಗಿತ್ತು, ಆದರೆ ಈಗ ಖುದ್ದು ಸಿಎಂ ಸಿದ್ದರಾಮಯ್ಯ ಅವರು ಅಖಾಡಕ್ಕೆ ಇಳಿಸಿದ್ದು, ಇನ್ನೇರಡು ತಿಂಗಳಿನಲ್ಲಿ ಕೆಪಿಎಸ್‌ಸಿ ಹುದ್ದೆಗಳಿಗೆ ಮರು ಎಕ್ಸಾಂ ನಡೆಸುವಂತೆ ಸೂಚನೆ ನೀಡಿದ್ದಾರೆ.

ಈ ಬಗ್ಗೆ ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿರುವ ಸಿಎಂ ಅವರು ಕೆಪಿಎಸ್‌ಸಿ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ಪರೀಕ್ಷೆಯಲ್ಲಿ ಕನ್ನಡಕ್ಕೆ ಅನುವಾದ ಮಾಡಲ್ಪಟ್ಟ ಪ್ರಶ್ನೆಗಳು ಅಸಮರ್ಪಕವಾಗಿದ್ದವೆಂಬ ವಿಚಾರ ನನ್ನ ಗಮನಕ್ಕೆ ಬಂದ ತಕ್ಷಣ, ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗಬಾರದೆಂಬ ಉದ್ದೇಶದಿಂದ ಮುಂದಿನ ಎರಡು ತಿಂಗಳುಗಳ ಒಳಗೆ ಮರುಪರೀಕ್ಷೆ ಮಾಡುವಂತೆ ಕೆಪಿಎಸ್‌ಸಿಗೆ ಸೂಚನೆ ನೀಡಿದ್ದೇನೆ.

ಕರ್ತವ್ಯ ಲೋಪವೆಸಗಿದ ಅಧಿಕಾರಿಗಳನ್ನು ಸೇವೆಯನ್ನು ಅಮಾನತು ಮಾಡಲಾಗಿದೆ. ಮುಂಬರುವ ಪರೀಕ್ಷೆಗಳನ್ನು ಅತ್ಯಂತ ಜವಾಬ್ದಾರಿಯುತವಾಗಿ, ಸಮರ್ಪಕವಾಗಿ ನಡೆಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು.

. ಮುಂಬರುವ ಪರೀಕ್ಷೆಗಳನ್ನು ಅತ್ಯಂತ ಜವಾಬ್ದಾರಿಯುತವಾಗಿ, ಸಮರ್ಪಕವಾಗಿ ನಡೆಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು.ಎರಡೂ ಪ್ರಶ್ನೆ ಪತ್ರಿಕೆಗಳಲ್ಲೂ ಹಲವಾರು ತಪ್ಪುಗಳು ಇರುವುದನ್ನು ನೋಡಿದರು ಕೂಡ ಕೆ.ಪಿಎಸ್‌ಸಿ ಅಧಿಕಾರಿಗಳು ತಮ್ಮ ತಪ್ಪನ್ನು ಒಪ್ಪಿಕೊಳ್ಳದೇ ಅದಕ್ಕೆತಮ್ಮದೇ ಮೂಗಿನ ನೇರರದಲ್ಲಿ ಉತ್ತರ ನೀಡುತ್ತಿದ್ದರು. ಈ ನಡುವೆ ಸಿಎಂ ಕೂಡ ಇದಕ್ಕೆ ಈಗ ಮಧ್ಯ ಪ್ರವೇಶ ನೀಡಿರುವುದು ಹಲವರಲ್ಲಿ ನೆಮ್ದಿಯ ನಿಟ್ಟಿಸಿರುವ ಬಿಟ್ಟಿದೆ.

https://twitter.com//siddaramaiah/status/1830502009562157361
RELATED ARTICLES

Most Popular