ಬೆಂಗಳೂರು: ನಟ ದರ್ಶನ್ ಕೊ* ಪ್ರರಣದಲ್ಲಿ ಸದ್ಯ ಬಳ್ಳಾರಿ ಜೈಲಿನಲ್ಲಿ ಆರೋಪಿಯಾಗಿ ಕಾಲ ಕಳೆಯುತ್ತಿದ್ದಾರೆ. ಇದಲ್ಲದೇ ಇಂದು ಬೆಂಗಳೂರು ಪೊಲೀಸರು ಕೊ…. ಪ್ರ** ಸಂಬಂಧಪಟ್ಟಂತೆ ನ್ಯಾಯಾಲಯಕ್ಕೆ ಚಾರ್ಚ್ ಶೀಟ್ ಸಲ್ಲಿಸಿದ್ದಾರೆ. ಚಾರ್ಚ್ ಶೀಟ್ ಸಲ್ಲಿಕೆ ಬೆನ್ನಲೇ ದರ್ಶನ್ ಎದೆಯಲ್ಲಿ ಭಯ ಶುರವಾಗಿದ್ದು, ತಮ್ಮ ವಕೀಲರಿಗೆ ಚಾರ್ಚ್ ಶೀಟ್ ಸಲ್ಲಿಕೆಯ ಪ್ರತಿ ಸಿಗುತ್ತಿದ್ದ ಹಾಗೇ ದರ್ಶನ್ ತಮ್ಮ ವಕೀಲರ ಜೊತೆಗೆ ಜಾಮೀನು ಸೇರಿದಂತೆ ಮುಂದಿನ ಕಾನೂನು ಕ್ರಮವನ್ನು ಬಳ್ಳಾರಿ ಜೈಲಿನಲ್ಲಿ ಮುಖತಃ ಭೇಟಿಯಾಗಿ ಮಾತನಾಡಲಿದ್ದಾರೆ. ಈ ನಡುವೆ ವಿಚಾರಣೆ ದಿನಾಂಕವನ್ನು ಕೂಡ ನ್ಯಾಯಾಲಯವು ಶೀಘ್ರದಲ್ಲಿ ಪ್ರಕಟಣೆ ಮಾಡಲಿದ್ದು, ಈಗ ದರ್ಶನ್ ಇನ್ನೇದ್ದಿರು ಕಾನೂನಿನ ಅಡಿಯಲ್ಲಿ ಹೋರಾಟ ನಡೆಸಬೇಕಾಗಿದೆ.
ಇವೆಲ್ಲದರ ನಡುವೆ ನಟ ದರ್ಶನ್ ಅಭಿಮಾನಿಗಳು ಪುಂಡಾಟ ಮೆರೆಯುತ್ತಿದ್ದು, ತಮ್ಮ ವಾಹನಗಳ ಮೇಲೆ ಜೈಲಿನಲ್ಲಿರುವ ದರ್ಶ್‌ನ್‌ಗೆ ನೀಡಿರುವ ವಿಚಾರಾಣಾಧೀನ ಖೈದಿ ನಂಬರ್‌ಗಳನ್ನು ಹಾಕಿಕೊಂಡು ಮೆರೆಯುತ್ತಿದ್ದಾರೆ.
ಇದಕ್ಕೆ ಪಾಠ ಕಲಿಸುವುದಕ್ಕೆ ಆರ್‌ಟಿಓ ಅಧಿಕಾರಿಗಳು ಮುಂದಾಗಿದ್ದಾರೆ. ಲೀಸರು ಹಾಗೂ ಆರ್‌ಟಿಒ ಇಲಾಖೆ ಅಧಿಕಾರಿಗಳು (RTO officers) ದರ್ಶನ್ ಅಭಿಮಾನಿಗಳ ವಾಹನಗಳ ಮೇಲೆ ಹದ್ದಿನ ಕಣ್ಣು ಇಟ್ಟಿದ್ದಾರೆ.ಅನವಶ್ಯಕ ಬರಹಗಳು ಕಂಡುಬಂದಲ್ಲಿ ಕ್ರಮ ತೆಗೆದುಕೊಳ್ಳೂತ್ತೇವೆ. ನೆಚ್ಚಿನ ನಟರ ಫೋಟೋಗಳನ್ನ ವಾಹನಗಳ ಮೇಲೆ ಹಾಕೋದು ಕಾನೂನು ಬಾಹಿರ ಎಂದು ಹೆಚ್ಚುವರಿ ಸಾರಿಗೆ ಆಯುಕ್ತ ಸಿ. ಮಲ್ಲಿಕಾರ್ಜುನ್ ಅವರು ವಾಹನದ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಅನಾವಶ್ಯಕ ಬರಹಗಳನ್ನ ವಾಹನಗಳ ಮೇಲೆ ಹಾಕಬಾರದು. ಇನ್ಮೇಲೆ ಈ ರೀತಿ ಸ್ಟಾರ್ ವಾರ್ ರೀತಿ ಅನಾವಶ್ಯಕ ಬರಹ, ಟಾಂಗ್ ಕೊಡೋ ಬರಹಗಳನ್ನ ತೆಗೆದು ಹಾಕುವಂತೆ ಸೂಚನೆ ನೀಡಿದ್ದಾರೆ.