Sunday, December 22, 2024
Homeಕರ್ನಾಟಕKarnataka Govt Holidays 2025: 2025ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಪ್ರಕಟ, ಇಲ್ಲಿದೆ...

Karnataka Govt Holidays 2025: 2025ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಪ್ರಕಟ, ಇಲ್ಲಿದೆ ಸಂಪೂರ್ಣ ಮಾಹಿತಿ…!

Karnataka Govt Holidays 2025: 2025ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಪ್ರಕಟ, ಇಲ್ಲಿದೆ ಸಂಪೂರ್ಣ ಮಾಹಿತಿ…!
ಬೆಂಗಳೂರು: ರಾಜ್ಯ ಸರ್ಕಾರವು 2025ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಮಾಹಿತಿಗಾಗಿ ಈ ಕೆಳಕಂಡಂತೆ ಪ್ರಕಟಿಸಲಾಗಿದೆ.

ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳು ಹಾಗೂ ಈ ಕೆಳಕಂಡ ದಿನಗಳು ಹೀಗಿದೆ.
ದಿನಾಂಕ ವಾರ ಸಾರ್ವತ್ರಿಕ ರಜಾದಿನ
ಜ.14 ಮಂಗಳವಾರ ಮಕರ ಸಂಕ್ರಾಂತಿ
ಫೆ. 26 ಬುಧವಾರ ಮಹಾಶಿವರಾತ್ರಿ
ಮಾ.31 ಸೋಮವಾರ ರಂಜಾನ್‌
ಏ.10 ಗುರುವಾರ ಮಹಾವೀರ ಜಯಂತಿ
ಏ.14 ಸೋಮವಾರ ಡಾ.ಬಿಆರ್‌ ಅಂಬೇಡ್ಕರ್‌ ಜಯಂತಿ
ಏ.18 ಶುಕ್ರವಾರ ಗುಡ್‌ಫ್ರೈಡೇ
ಏ.30 ಬುಧವಾರ ಬಸವ ಜಯಂತಿ, ಅಕ್ಷತ ತೃತೀಯ
ಮೇ.1 ಗುರುವಾರ ಕಾರ್ಮಿಕರ ದಿನಾಚರಣೆ
ಜೂ.7 ಶನಿವಾರ ಬಕ್ರೀದ್‌
ಆ. 15 ಶುಕ್ರವಾರ ಸ್ವಾತಂತ್ರ್ಯ ದಿನಾಚರಣೆ
ಆ.27 ಬುಧವಾರ ವರಸಿದ್ದಿ ವಿನಾಯಕ ವ್ರತ
ಸೆ. 5 ಶುಕ್ರವಾರ ಈದ್‌ಮಿಲಾದ್‌
ಅ.1 ಬುಧವಾರ ಮಹಾನವಮಿ, ಆಯುಧಪೂಜೆ, ವಿಜಯದಶಮಿ
ಅ.2 ಗುರುವಾರ ಗಾಂಧಿ ಜಯಂತಿ
ಅ. 7 ಮಂಗಳವಾರ ಮಹರ್ಷಿ ವಾಲ್ಮೀಕಿ ಜಯಂತಿ
ಅ.20 ಸೋಮವಾರ ನರಕ ಚತುದರ್ಶಿ
ಅ.22 ಬುಧವಾರ ಬಲಿಪಾಡ್ಯಮಿ, ದೀಪಾವಳಿ
ನ.1 ಶನಿವಾರ ಕನ್ನಡ ರಾಜ್ಯೋತ್ಸವ
ಡಿ. 25 ಗುರುವಾರ ಕ್ರಿಸ್‌ಮಸ್‌ಬಲಿಪಾಡ್ಯಮಿ, ದೀಪಾವಳಿ ಕನ್ನಡ ರಾಜ್ಯೋತ್ಸವ ಕ್ರಿಸ್ ಮಸ್

ಸೂಚನೆ:ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಗಣರಾಜ್ಯೋತ್ಸವ (26.01.2025), ಯುಗಾದಿ ಹಬ್ಬ (30.03.2025), ಮೊಹರಂ ಕಡೆ ದಿನ (06.07.2025) ಮತ್ತು ಮಹಾಲಯ ಅಮವಾಸ್ಯೆ (21.09.2025) ಹಾಗೂ ಎರಡನೇ ಶನಿವಾರದಂದು ಬರುವ ಕನಕದಾಸ ಜಯಂತಿ (08.11.2025) ಈ ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ.

ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಕಛೇರಿಗಳು ಮುಚ್ಚಲ್ಪಡುತ್ತವೆ. ಕಛೇರಿಯ ಜರೂರು ಕೆಲಸವನ್ನು ವಿಲೇವಾರಿ ಮಾಡುವ ಬಗ್ಗೆ ಇಲಾಖಾ ಮುಖ್ಯಸ್ಥರುಗಳು ಸೂಕ್ತ ವ್ಯವಸ್ಥೆ ಮಾಡತಕ್ಕದ್ದು.

ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನ ಬಾಂಧವರ ಹಬ್ಬಗಳು ನಿಗಧಿತ ದಿನಾಂಕದಂದು ಬೀಳದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ಬಾಂಧವರಿಗೆ ನಿಗಧಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದು.
ದಿನಾಂಕ:03.09.2025 (ಬುಧವಾರ) ಕೈಲ್ ಮೂಹೂರ್ತ, ದಿನಾಂಕ:18.10.2025 (ಶನಿವಾರ) ತುಲಾ ಸಂಕ್ರಮಣ ಹಾಗೂ ದಿನಾಂಕ:05.12.2025 (ಶುಕ್ರವಾರ) ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ. ಸಾರ್ವತ್ರಿಕ ರಜಾ ದಿನಗಳ ಜೊತೆಗೆ ರಾಜ್ಯ ಸರ್ಕಾರಿ ನೌಕರರು ಎರಡು ದಿವಸಗಳಿಗೆ ಮೀರದಂತೆ 2025ನೇ ವರ್ಷದಲ್ಲಿ ಅಧಿಸೂಚನೆ-1ರ ಅನುಬಂಧದಲ್ಲಿ ತಿಳಿಸಿರುವ ಪರಿಮಿತ ರಜೆಯನ್ನು ಪೂರ್ವಾನುಮತಿ ಪಡೆದು ಉಪಯೋಗಿಸಿಕೊಳ್ಳಬಹುದು. ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಅಧಿಕಾರವುಳ್ಳ ಅಧಿಕಾರಿಗಳು ಪ್ರಸ್ತುತ ಅನುಮತಿಗೆ ಮಂಜೂರಾತಿ ನೀಡತಕ್ಕದ್ದು,

2025ನೇ ವರ್ಷಕ್ಕೆ ರಾಜ್ಯ ಸರ್ಕಾರಿ ನೌಕರರಿಗೆ ಇರುವ ಪರಿಮಿತ ರಜಾ ದಿನಗಳ ಪಟ್ಟಿ ವಿವರ ಹೀಗಿದೆ

ಪರಿಮಿತ ರಜೆಗಳ ವಿವರ ಹೀಗಿದೆ
ಜನವರಿ 1: ಹೊಸ ವರ್ಷಾರಂಭ
ಫೆಬ್ರವರಿ 6: ಮಧ್ವ ನವಮಿ
ಫೆಬ್ರವರಿ 14: ಶಬ್ ಎ ಬರಾತ್
ಮಾರ್ಚ್ 13 ಹೋಳಿ ಹಬ್ಬ
ಮಾರ್ಚ್ 27 ಶಬ್ ಎ ಖದರ್
ಮಾರ್ಚ್ 28 ಜುಮತ್ ಉಲ್ ವಿದಾ
ಏಪ್ರಿಲ್ 2 ದೇವರ ದಾಸಿಮಯ್ಯ ಜಯಂತಿ
ಏಪ್ರಿಲ್ 19 ಹೋಲಿ ಸ್ಯಾಟರ್ ಡೇ
ಮೇ 2 ಶಂಕರಾಚಾರ್ಯ ಮತ್ತು ರಾಮಾನುಜಾಚಾರ್ಯ ಜಯಂತಿ
ಮೇ 12 ಬುದ್ಧ ಪೂರ್ಣಿಮಾ
ಆಗಸ್ಟ್ 8 ವರಮಹಾಲಕ್ಷ್ಮಿ ವ್ರತ
ಆಗಸ್ಟ್ 16 ಶ್ರೀಕೃಷ್ಣ ಜನ್ಮಾಷ್ಟಮಿ
ಆಗಸ್ಟ್ 26 ಸ್ವರ್ಣಗೌರಿ ವ್ರತ
ಸೆಪ್ಟೆಂಬರ್ 6 ಅನಂತಪದ್ಮನಾಭ ವ್ರತ
ಸೆಪ್ಟೆಂಬರ್ 8 ಕನ್ಯಾ ಮರಿಯಂ ಜಯಂತಿ
ಸೆಪ್ಟೆಂಬರ್ 17 ವಿಶ್ವಕರ್ಮ ಜಯಂತಿ
ಆಕ್ಟೋಬರ್ 18 ತುಲಾ ಸಂಕ್ರಮಣ
ನವೆಂಬರ್ 5 ಗುರುನಾನಕ್ ಜಯಂತಿ
ಡಿಸೆಂಬರ್ 5 ಹುತ್ತರಿ ಹಬ್ಬ
ಡಿಸೆಂಬರ್ 24 ಕ್ರಿಸ್ ಮಸ್ ಈವ್

ಶ್ರೀ ರಾಮನವಮಿ (06.04.2025) ಮತ್ತು ಬ್ರಹ್ಮಶ್ರೀ ನಾರಾಯಣಗುರು ಜಯಂತಿ (07.09.2025) ಭಾನುವಾರದಂದು ಹಾಗೂ ಋಗ್ ಉಪಕರ್ಮ ಮತ್ತು ಯಜುರ್ ಉಪಕರ್ಮ (09.08.2025) ಎರಡನೇ ಶನಿವಾರದಂದು ಬರುವುದರಿಂದ ಈ ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ. ಸೌರಮಾನ ಯುಗಾದಿ (14.04.2025) ಸೋಮವಾರ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗೂ ತಿರುಓಣಂ (05.09.2025) ಶುಕ್ರವಾರ ಈದ್-ಮಿಲಾದ್ ನಿಮಿತ್ತ ಘೋಷಿಸಿರುವ ಸಾರ್ವತ್ರಿಕ ರಜಾ ದಿನಗಳಂದು ಬರುವುದರಿಂದ ಈ ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ

RELATED ARTICLES

Most Popular