Sunday, December 22, 2024
Homeಕರ್ನಾಟಕVAO Exam 2024: ಗ್ರಾಮಾಡಳಿತ ಅಧಿಕಾರಿ ನೇಮಕಾತಿ, ಕಡ್ಡಾಯ ಕನ್ನಡ ಪರೀಕ್ಷೆ ಕೀ ಉತ್ತರ ಪ್ರಕಟ,...

VAO Exam 2024: ಗ್ರಾಮಾಡಳಿತ ಅಧಿಕಾರಿ ನೇಮಕಾತಿ, ಕಡ್ಡಾಯ ಕನ್ನಡ ಪರೀಕ್ಷೆ ಕೀ ಉತ್ತರ ಪ್ರಕಟ, ಇಲ್ಲಿದೆ ಮಾಹಿತಿ…!

28.10.2024 ಕಂದಾಯ ಇಲಾಖೆಯಲ್ಲಿನ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ಮತ್ತು ಜಿಟಿಟಿಸಿ ಸಂಸ್ಥೆಯಲ್ಲಿನ ವಿವಿಧ ವೃಂದದ ಹುದ್ದೆಗಳಿಗೆ ದಿನಾಂಕ 26.10.2024ರಂದು ಕಡ್ಡಾಯ ಕನ್ನಡ ಪರೀಕ್ಷೆಯನ್ನು ನಡೆಸಲಾಗಿದ್ದು, ಸದರಿ ಪರೀಕ್ಷೆಯ ಕೀ ಉತ್ತರಗಳನ್ನು ಕೆಇಎ ವೆಬ್‌ಸೈಟಿನಲ್ಲಿ http://kea.kar.nic.in ರಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ.

ಬೆಂಗಳೂರು: ಒಂದು ಸಾವಿರ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಅ.27ರಂದು ಮುಖ್ಯ ಪರೀಕ್ಷೆ ನಡೆದಿತ್ತು. ಈ ನಡುವೆ ಈ ಪರೀಕ್ಷೆಯ ಕೀ ಉತ್ತರಗಳನ್ನು ಕೆಇಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಕೀ ಉತ್ತರಗಳಲ್ಲಿ ಏನಾದರೂ ಅಕ್ಷೇಪಣೆಗಳಿದ್ದರೆ ಅ.29ರ ಸಂಜೆ 5.30ರೊಳಗೆ ಸಲ್ಲಿಸಬೇಕಾಗಿದೆ.

28.10.2024 ಕಂದಾಯ ಇಲಾಖೆಯಲ್ಲಿನ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ಮತ್ತು ಜಿಟಿಟಿಸಿ ಸಂಸ್ಥೆಯಲ್ಲಿನ ವಿವಿಧ ವೃಂದದ ಹುದ್ದೆಗಳಿಗೆ ದಿನಾಂಕ 26.10.2024ರಂದು ಕಡ್ಡಾಯ ಕನ್ನಡ ಪರೀಕ್ಷೆಯನ್ನು ನಡೆಸಲಾಗಿದ್ದು, ಸದರಿ ಪರೀಕ್ಷೆಯ ಕೀ ಉತ್ತರಗಳನ್ನು ಕೆಇಎ ವೆಬ್‌ಸೈಟಿನಲ್ಲಿ http://kea.kar.nic.in ರಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ.

ಇದನ್ನೂ ಓದಿ: ಇಂದಿನಿಂದ ಎಲ್ಲಾ ‘ನೇಮಕಾತಿ’ಗಳನ್ನು ಕನಿಷ್ಠ ಮೂರು ತಿಂಗಳವರೆಗೆ ಮುಂದೂಡಲು ‘ಕರ್ನಾಟಕ ಸರ್ಕಾರ’ ನಿರ್ಧಾರ…!

ಪ್ರಕಟಿಸಿರುವ ಕೀ ಉತ್ತರಗಳಿಗೆ ಏನಾದರೂ ಆಕ್ಷೇಪಣೆಗಳಿದ್ದಲ್ಲಿ, ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಒದಗಿಸಲಾದ ಆನ್‌ಲೈನ್‌ ಲಿಂಕ್‌ನಲ್ಲಿ ಮಾತ್ರ ದಿನಾಂಕ 29.10.2024ರ ಸಂಜೆ 5.30 ಯೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ.
ಆಕ್ಷೇಪಣೆಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಪತ್ರಿಕೆಯ ವಿವರ, ಪರೀಕ್ಷಾ ದಿನಾಂಕ, ವರ್ಷನ್ ಕೋಡ್, ಪ್ರಶ್ನೆ ಸಂಖ್ಯೆಗಳ ವಿವರಗಳನ್ನು ಹಾಗೂ ಪೂರಕ ದಾಖಲೆಗಳನ್ನು ಪಿಡಿಎಫ್ ರೂಪದಲ್ಲಿ ಸಲ್ಲಿಸಬೇಕು. ಸಲ್ಲಿಸಲಾಗುವ ಪ್ರತಿ ಆಕ್ಷೇಪಣೆಗಳಿಗೆ ರೂ 50/- ಅನ್ನು ಪಾವತಿಸತಕ್ಕದ್ದು ಹಾಗೂ ಆಕ್ಷೇಪಣೆ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ. ಮೇಲ್ಕಂಡ ಮಾಹಿತಿಗಳನ್ನು ಸಲ್ಲಿಸದ ಅಥವಾ ಶುಲ್ಕ ಪಾವತಿಸದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ವಿಷಯ ತಜ್ಞರ ಸಮಿತಿಯು ನಿರ್ಧರಿಸಿ ತೀರ್ಮಾನಿಸುವ ಕೀ ಅಂತಿಮವಾಗಿರುತ್ತದೆ ಅಂತ ತಿಳಿಸಿದೆ.

ಇದನ್ನೂ ಓದಿ: ದೀಪಗಳ ಹಬ್ಬವಾದ ದೀಪಾವಳಿಯ ಇತಿಹಾಸ, ಮಹತ್ವ ಮತ್ತು ಇತರ ವಿವರಗಳು ಇಲ್ಲಿವೆ

RELATED ARTICLES

Most Popular