Monday, December 23, 2024
Homeಭಾರತರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದ ಬಗೆಹರಿಯುವಂತೆ ದೇವರಲ್ಲಿ ಪ್ರಾರ್ಥಿಸಿದ್ದೆ: ಸಿಜೆಐ ಚಂದ್ರಚೂಡ್ :

ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದ ಬಗೆಹರಿಯುವಂತೆ ದೇವರಲ್ಲಿ ಪ್ರಾರ್ಥಿಸಿದ್ದೆ: ಸಿಜೆಐ ಚಂದ್ರಚೂಡ್ :

"ರಾಮ ಮಂದಿರ ಮತ್ತು ಬಾಬರಿ ಮಸೀದಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ಸಮಯದಲ್ಲಿ, ಈ ವಿಷಯದ ಪರಿಹಾರಕ್ಕಾಗಿ ನಾನು ದೇವರನ್ನು ಪ್ರಾರ್ಥಿಸಿದ್ದೆ. ನೀವು ನಂಬಿದರೆ, ದೇವರು ಖಂಡಿತವಾಗಿಯೂ ದಾರಿ ತೋರಿಸುತ್ತಾನೆ ಎಂದು ಅವರು ಹೇಳಿದರು.

ನವದೆಹಲಿ: ಅಯೋಧ್ಯೆ ಮತ್ತು ಬಾಬರಿ ಮಸೀದಿಗೆ ಸಂಬಂಧಿಸಿದಂತೆ 2019 ರ ನವೆಂಬರ್ 9 ರಂದು ಐತಿಹಾಸಿಕ ತೀರ್ಪು ಹೊರಬಂದಿದೆ. ಈ ತೀರ್ಪಿನ ಪೀಠದಲ್ಲಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಕೂಡ ಇದ್ದರು. ಇತ್ತೀಚೆಗೆ, ಮುಖ್ಯ ನ್ಯಾಯಮೂರ್ತಿಗಳು ಪ್ರಕರಣವನ್ನು ನಿರ್ಧರಿಸಲು ಸಾಧ್ಯವಾಗದಿದ್ದಾಗ, ದಾರಿ ತೋರಿಸುವಂತೆ ದೇವರನ್ನು ಪ್ರಾರ್ಥಿಸಲಾಗಿತ್ತು ಅಂಥ ಹೇಳಿದ್ದಾರೆ.

“ರಾಮ ಮಂದಿರ ಮತ್ತು ಬಾಬರಿ ಮಸೀದಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ಸಮಯದಲ್ಲಿ, ಈ ವಿಷಯದ ಪರಿಹಾರಕ್ಕಾಗಿ ನಾನು ದೇವರನ್ನು ಪ್ರಾರ್ಥಿಸಿದ್ದೆ. ನೀವು ನಂಬಿದರೆ, ದೇವರು ಖಂಡಿತವಾಗಿಯೂ ದಾರಿ ತೋರಿಸುತ್ತಾನೆ ಎಂದು ಅವರು ಹೇಳಿದರು.

ಭಾನುವಾರ ಮಹಾರಾಷ್ಟ್ರದ ಕನ್ಹೇರ್ಸರ್ನಲ್ಲಿ ಜನರನ್ನುದ್ದೇಶಿಸಿ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮಾತನಾಡಿದರು. ಇದೇ ವೇಳೇ ಅವರು ನಾವು “ಆಗಾಗ್ಗೆ ನಾವು ಕೆಲವು ಸಮಸ್ಯೆಗಳನ್ನು ಹೊಂದಿದ್ದೇವೆ, ಕೆಲವು ಸಾರಿ ನಾವು ಪರಿಹಾರವನ್ನು ತಲುಪಲು ಮತ್ತು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅಯೋಧ್ಯೆಯ ಸಮಯದಲ್ಲಿ (ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದ) ಇದೇ ರೀತಿಯ ಘಟನೆ ನಡೆಯಿತು. “ಈ ಪ್ರಕರಣ ಮೂರು ತಿಂಗಳ ಕಾಲ ನನ್ನ ಮುಂದೆ ಇತ್ತು. “ನಾನು ದೇವರ ಮುಂದೆ ಕುಳಿತು ಈ ಪ್ರಕರಣಕ್ಕೆ ನೀವು ಪರಿಹಾರವನ್ನು ಕಂಡುಹಿಡಿಯಬೇಕು ಅಂತ ದೇವರ ಮುಂದೆ ಕುಳಿತುಕೊಂಡು ಹೇಳಿದ್ದೆ ಅಂತ ಹೇಳಿದರು.
ಅಂದ ಹಾಗೇ ನವೆಂಬರ್ 9, 2019 ರಂದು, ಅಂದಿನ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಸುಪ್ರೀಂ ಕೋರ್ಟ್ನ ಐದು ನ್ಯಾಯಾಧೀಶರ ಪೀಠವು ಅಯೋಧ್ಯೆಗೆ ಸಂಬಂಧಿಸಿದಂತೆ ಐತಿಹಾಸಿಕ ತೀರ್ಪನ್ನು ನೀಡಿತು. ಸಿಜೆಐ ರಂಜನ್ ಗೊಗೊಯ್ ಅವರು ರಾಮ ಮಂದಿರ ನಿರ್ಮಾಣಕ್ಕೆ ಮಾಡುವುದಕ್ಕೆ ಅವಕಾಶಕೊಟ್ಟರು . ಅಯೋಧ್ಯೆಯಲ್ಲಿಯೇ ಮಸೀದಿಗೆ 5 ಎಕರೆ ಭೂಮಿಯನ್ನು ನೀಡಲಾಗುವುದು ಎಂದು ಅದು ತೀರ್ಪು ನೀಡಿತು. ಈ ಐವರು ನ್ಯಾಯಾಧೀಶರ ಪೀಠದಲ್ಲಿ ಡಿ.ವೈ.ಚಂದ್ರಚೂಡ್ ಕೂಡ ಇದ್ದರು. ರಾಮ ಮಂದಿರ ನಿರ್ಮಾಣದ ನಂತರ ಜುಲೈ ತಿಂಗಳಲ್ಲಿ ಸಿಜೆಐ ಡಿ.ವೈ.ಚಂದ್ರಚೂಡ್ ಅವರು ರಾಮ ಮಂದಿರಕ್ಕೆ ಭೇಟಿ ನೀಡಿದನ್ನು ಸ್ಮರಿಸಿಕೊಳ್ಳಬಹುದಾಗಿದೆ.

RELATED ARTICLES

Most Popular