Monday, December 23, 2024
Homeಕರ್ನಾಟಕಶಿಕ್ಷ ಕೋಪೈಲಟ್ ಕಾರ್ಯಕ್ರಮ ರಾಜ್ಯಾದ್ಯಂತ ಶಾಲೆಗಳಲ್ಲಿ ಜಾರಿಗೆ ಕ್ರಮ - ಸಚಿವ ಎಸ್. ಮಧುಬಂಗಾರಪ್ಪ

ಶಿಕ್ಷ ಕೋಪೈಲಟ್ ಕಾರ್ಯಕ್ರಮ ರಾಜ್ಯಾದ್ಯಂತ ಶಾಲೆಗಳಲ್ಲಿ ಜಾರಿಗೆ ಕ್ರಮ – ಸಚಿವ ಎಸ್. ಮಧುಬಂಗಾರಪ್ಪ

ರಾಜ್ಯಾದ್ಯಂತ 57 ಲಕ್ಷ ಮಕ್ಕಳು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಶಾಲೆಗಳಲ್ಲಿ ಉತ್ತಮ ಫಲಿತಾಂಶವನ್ನು ಗಳಿಸುವುದರ ಜೊತೆಗೆ ಉತ್ತಮ ಬೋಧನ ಸಂಪನ್ಮೂಲ ಕಲಿಕಾ ಅನುಭವ ನೀಡುವುದು ನಮ್ಮ ಗುರಿ ಎಂದು ಸಚಿವರು ತಿಳಿಸಿದರು.

ಬೆಂಗಳೂರು: ಕೃತಕ ಬುದ್ದಿಮತ್ತೆ ಉಪಯೋಗಿಸಿ ಡಿಜಿಟಲ್ ಮಾಧ್ಯಮದಿಂದ ಶಿಕ್ಷಕರು ಮಕ್ಕಳಿಗೆ ಶಿಕ್ಷಣ ನೀಡುವ ಶಿಕ್ಷ ಕೋಪೈಲಟ್ ಕಾರ್ಯಕ್ರಮ ರಾಜ್ಯಾದ್ಯಂತ ಶಾಲೆಗಳಲ್ಲಿ ಜಾರಿಗೊಳ್ಳುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಎಸ್. ಮಧುಬಂಗಾರಪ್ಪ ಅವರು ತಿಳಿಸಿದರು.

ಇಂದು ವಿಧಾನಸೌಧದಲ್ಲಿ ಈ ಶಿಕ್ಷಣ ಕೋಪೈಲಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ಪ್ರಸ್ತುತ ಹಾಗೂ ಭವಿಷ್ಯದ ಶಾಲಾ ಶಿಕ್ಷಣವನ್ನು ಗಮನದಲ್ಲಿಟ್ಟುಕೊಂಡು ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಡಿಜಿಟಲ್ ಆ್ಯಪ್ ಮೂಲಕ ಪಠ್ಯದ ಸಂಪೂರ್ಣ ನಕ್ಷೆಯನ್ನು ಇದರಲ್ಲಿ ಸಿದ್ದಪಡಿಸಿದ್ದು, ಶಿಕ್ಷಕರು ವಿಷಯಕ್ಕೆ ಅನುಗುಣವಾಗಿ ಮಕ್ಕಳಿಗೆ ಶಿಕ್ಷಣ ನೀಡಬಹುದು. ಶಿಕ್ಷಣದಲ್ಲಿ ಗುಣಮಟ್ಟ, ತಲುಪಿವಿಕೆ ಸಮಾನತೆಯನ್ನು ಗಮನದಲ್ಲಿರಿಕೊಂಡು ಮಕ್ಕಳಿಗೆ ಇದನ್ನು ನೀಡುವ ಉದ್ದೇಶ ನಮ್ಮದಾಗಿದೆ.

ಇಂದಿನ ತಂತ್ರಜ್ಞಾನ ಯುಗದಲ್ಲಿ ಈ ರೀತಿಯ ಕಲಿಕೆ ಬಹಳ ಮುಖ್ಯವಾಗಿದೆ. ಅದರಲ್ಲೂ ಗ್ರಮೀಣ ಭಾಗಗಳ 750ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಸುಮಾರು 1000 ಶಿಕ್ಷಕರನ್ನು ಈ ಕಾರ್ಯಕ್ರಮದಡಿ ತರಬೇತಿಗೆ ಆಯ್ಕೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಶಿಕ್ಷಣ ಫೌಂಡೇಷನ್ ಮತ್ತು ಮೈಕ್ರೋಸಾಫ್ಟ್ ಕಂಪನಿಗಳು ಸಹಕಾರ ನೀಡಿದೆ.

ರಾಜ್ಯಾದ್ಯಂತ 57 ಲಕ್ಷ ಮಕ್ಕಳು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಶಾಲೆಗಳಲ್ಲಿ ಉತ್ತಮ ಫಲಿತಾಂಶವನ್ನು ಗಳಿಸುವುದರ ಜೊತೆಗೆ ಉತ್ತಮ ಬೋಧನ ಸಂಪನ್ಮೂಲ ಕಲಿಕಾ ಅನುಭವ ನೀಡುವುದು ನಮ್ಮ ಗುರಿ ಎಂದು ಸಚಿವರು ತಿಳಿಸಿದರು.

ಇದರಲ್ಲಿ ಸ್ವಯಂ ಕಲಿಕೆ ಮತ್ತು ಸಂವಾದಾತ್ಮಕ ವಿಷಯ ರಚನೆಗಾಗಿ ಶಿಕ್ಷಕರಿಗೆ ಚಾಟ್ ಬಾತ್ ಸಹ ಒದಗಿಸಲಾಗಿದೆ. ಅಜೀಂ ಪ್ರೇಂಜಿ ಪೌಂಡೇಷನ್‍ರವರು 1591 ಕೋಟಿ ರೂ ಮೊತ್ತವನ್ನು ಮೂರು ವರ್ಷದ ಅವಧಿಗೆ ಮಕ್ಕಳಿಗೆ ಮೊಟ್ಟೆ, ಚಿಕ್ಕಿ ಮತ್ತು ಬಾಳೆಹಣ್ಣು ಒದಗಿಸಲು ನೀಡಿದೆ. ಸರ್ಕಾರವು ಶಾಲೆಗಳ ವಿಜ್ಞಾನ ಪ್ರಯೋಗಾಲಯಕ್ಕೆ ಬಜೆಟ್‍ನಲ್ಲಿ ಅನುದಾನ ಒದಗಿಸಿದೆ.

25 ಸಾವಿರ ಮಕ್ಕಳಿಗೆ ನೀಟ್ ಮತ್ತು ಸಿ.ಇ.ಟಿ ಪ್ರವೇಶ ತರಬೇತಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ದಿಕ್ಸೂಚಿ ಕಾರ್ಯಕ್ರಮದಡಿ 4 ಲಕ್ಷ ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ. ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಸಹ ನಮ್ಮ ಕಾರ್ಯಕ್ರಮಗಳಿಗೆ ಕೈ ಜೋಡಿಸಿವೆ. ಮಕ್ಕಳು ಅನುತ್ತೀರ್ಣವಾದರೂ ಸಹ ವಿದ್ಯಾಭ್ಯಾಸವನ್ನು ಮೊಟಕುಗೊಳಿಸದೆ ಪೋಷಕರು ಶಿಕ್ಷಣ ಮುಂದುವರೆಸಲು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೀಶ್ ಕುಮಾರ್ ಸಿಂಗ್, ಆಯುಕ್ತರಾದ ಕೆ.ವಿ. ತ್ರಿಲೋಕಚಂದ್ರ, ಮೈಕ್ರೋಸಾಫ್ಟ್ ರಿಸರ್ಚ್ ಇಂಡಿಯಾ ಹಾಗೂ ಶಿಕ್ಷಣ ಫೌಂಡೇಷನ್‍ನ ಮುಖ್ಯಸ್ಥರು ಉಪಸ್ಥಿತರಿದ್ದರು.

RELATED ARTICLES

Most Popular