Monday, December 23, 2024
Homeಕರ್ನಾಟಕಚಾಮುಂಡಿ ಬೆಟ್ಟ | ಚಾಮುಂಡಿ ಬೆಟ್ಟದಲ್ಲಿ ಮೊಬೈಲ್ ಬಳಕೆ ನಿಷೇಧ

ಚಾಮುಂಡಿ ಬೆಟ್ಟ | ಚಾಮುಂಡಿ ಬೆಟ್ಟದಲ್ಲಿ ಮೊಬೈಲ್ ಬಳಕೆ ನಿಷೇಧ

ಮೈಸೂರು: ಚಾಮುಂಡಿ ಬೆಟ್ಟದಲ್ಲಿರುವ ನಾಡ ದೇವತೆ ದರ್ಶನಕ್ಕೆ ತೆರಳುವವರು ಇನ್ಮುಂದೆ ತೆರಳುವವರು ಮೊಬೈಲ್‌ ಅನ್ನು ಬಳಕೆ ಮಾಡುವುದನ್ನು ನಿಲ್ಲಿಸಬೇಕಾಗಿದೆ.ಹೌದು, ಇಂದು ಚಾಮುಂಡಿ ಬೆಟ್ಟದಲ್ಲಿ ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಈ ಬಗ್ಗೆ ತೆಗೆದುಕೊಂಡ ತೀರ್ಮಾನವನ್ನು ತಿಳಿಸಿದರು.

ಇದೇ ವೇಳೆ ಅವರು ಮಾತನಾಡಿ ಬೆಟ್ಟದಲ್ಲಿ ಇನ್ಮುಂದೆ ಧೂಮಪಾನ ಮತ್ತು ಮದ್ಯಪಾನ ಸೇರಿದಂತೆ ಇತರೆ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಲ್ಲಿಸುವುದಕ್ಕೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ ಅಂಥ ತಿಳಿಸಿದರು. ಇನ್ನೂ ಬೆಟ್ಟವನ್ನು ಪ್ಲಾಸ್ಟಿಕ್‌ ಮುಕ್ತವನ್ನಾಗಿ ಮಾಡುವುಕ್ಕೆ ಕೂಡ ನಿರ್ಧಾರ ಮಾಡಿದ್ದು, ಈ ನಿಟ್ಟಿನಲ್ಲಿ ಯಾವುದೇ ಪ್ಲಾಸ್ಟಿಕ್‌ ವಸ್ತುಗಳನ್ನು ಬಳಕೆ ಮಾಡದಂತೆ ಸೂಚನೆ ನೀಡಲಾಗಿದೆ ಅಂತ ತಿಳಿಸಿದರು.

ಇದಲ್ಲದೇ ದೇವಸ್ಥಾನದ ಅವರಣದಲ್ಲಿ ಮೊಬೈಲ್‌ ಬಳಕೆ ಮಾಡುವುದಕ್ಕೆ ನಿರ್ಬಂದ ಹೇರಲಾಗಿದ್ದು, ಯಾರು ಕೂಡ ಮೊಬೈಲ್‌ ಬಳಕೆ ಮಾಡದಂತೆ ತಮ್ಮ ಮೊಬೈಲ್‌ ಅನ್ನು ಸ್ವಿಚ್‌ ಆಫ್ ಮಾಡಲು ನಿರ್ದೇಶನ ಮಾಡಲಾಗಿದೆ ಅಂತ ತಿಳಿಸಿದರು.ಇಲದ್ಲದೇ ಅಪರಾಧವನ್ನು ತಡೆಗಟ್ಟುವ ನಿಟ್ಟಿನಲ್ಲಿ ಟಾಸ್ಕ್‌ಪೋರ್ಸ್‌ ಅನ್ನು ರಚನೆ ಮಾಡಲಾಗಿದೆ ಅಂಥ ತಿಳಿಸಿದರು.

ಇನ್ನೂ ಸಿಸಿಟಿವಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಖಾಸಗಿ ಸಂಸ್ಥೆಯೊಂದು ಮುಂದೆ ಬಂದಿದ್ದು, ಸಾರ್ವಜನಿಕರಲ್ಲಿ ಭಯವನ್ನು ಹೋಗಿಸುವ ನಿಟ್ಟಿನಲ್ಲಿ ಎಲ್ಲ ಕಡೆ ಸಿಸಿಟಿವಿಯನ್ನು ಹಾಕಲಾಗುವುದು ಅಂತ ತಿಳಿಸಿದರು. ಇದಲ್ಲದೇ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಂತೆ ಬೇರೆ ದೇವಸ್ಥಾನಗಳಲ್ಲಿ ಕೂಡ ಪ್ರಾಧಿಕಾರವನ್ನು ರಚನೆ ಮಾಡುವಂತೆ ಮನವಿ ಬಂದಿದ್ದು, ಈ ನಿಟ್ಟಿನಲ್ಲಿ ಮುಂಬರುವ ದಿವಸದಲ್ಲಿ ಈ ಬಗ್ಗೆ ಸೂಕ್ತ ಕ್ರವನ್ನು ತೆಗೆದುಕೊಳ್ಳಲಾಗುವುದು ಅಂಥ ತಿಳಿಸಿದರು. ಇದಲ್ಲದೇ ಭಕ್ತರಿಗೆ ಎಲ್ಲಾ ರೀತಿಯಲ್ಲಿ ಮೂಲಭೂತ ವ್ಯವಸ್ಥೆಗಳನ್ನು ಒದಗಿಸುವುದಕ್ಕೆ ನಾವು ಬದ್ದರಾಗಿದ್ದು, ಈ ಬೆಟ್ಟದಲ್ಲಿ ಮಾತ್ರವಲ್ಲ ಎಲ್ಲಾ ದೇವಸ್ಥಾನಗಳಲ್ಲಿ ಸ್ವಚ್ಚತೆಯನ್ನು ಕಾಪಾಡುವ ನಿಟ್ಟಿನಲ್ಲಿ ಗಮನಹರಿಸಲಾಗಿದೆ. ಇನ್ನೂ ಚಾಮುಂಡಿ ಬೆಟ್ಟದಲ್ಲಿ ಪ್ರಸಾದ ವಿನಿಯೋಗಕ್ಕೆ ಕೂಡ ಸೂಕ್ತ ವ್ಯವಸ್ಥೆ ಮಾಡಲಾಗುವುದು ಅಂತ ತಿಳಿಸಿದರು

RELATED ARTICLES

Most Popular