Press ID & Credential Portal
Apply / Verify  ➔
Stories
Press ID
Login
LIVE TV StateNationalInternationalBusinessLifestyleJobs
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

Stanford–Elsevier ವಿಶ್ವದ ಅಗ್ರ 2% ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರು ಸರ್ಕಾರಿ ಕಾಲೇಜಿನ ಗಣಿತ ಪ್ರಾಧ್ಯಾಪಕ ಡಾ. ಯೋಗೀಶ್ ಎನ್.

ತುಮಕೂರು: ಅಮೆರಿಕದ ಪ್ರತಿಷ್ಠಿತ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಮತ್ತು ಎಲ್ಸೆವಿಯರ್ ಪ್ರಕಟಣೆ ಜಂಟಿಯಾಗಿ ಹೊರತಂದಿರುವ 2026ನೇ ಸಾಲಿನ ವಿಶ್ವದ ಅಗ್ರ ಶೇಕಡಾ 2ರಷ್ಟು ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಯೋಗೀಶ್ ಎನ್. ಅವರು ಸ್ಥಾನ ಪಡೆದಿದ್ದಾರೆ.

ಜಾಗತಿಕ ಮಟ್ಟದಲ್ಲಿ ಕೈಗೊಳ್ಳಲಾದ ಸಿಂಗಲ್-ಯಿರ್ ಸೈಂಟಿಫಿಕ್ ಇಂಪ್ಯಾಕ್ಟ್ 2026ರ ವಿಭಾಗದಲ್ಲಿ ಈ ಹೆಮ್ಮೆಯ ಸಾಧನೆ ದಾಖಲಾಗಿದೆ. ಸಂಶೋಧನಾ ಪ್ರಕಟಣೆಗಳಿಗೆ ದೊರೆತ ಉಲ್ಲೇಖಗಳು, ಹೆಚ್-ಇಂಡೆಕ್ಸ್, ಸಹಲೇಖಕತ್ವಕ್ಕೆ ಹೊಂದಾಣಿಕೆ ಮಾಡಿದ ಉಲ್ಲೇಖ ಸೂಚ್ಯಂಕಗಳು ಹಾಗೂ ವಿವಿಧ ಪ್ರಮಾಣೀಕೃತ ಶೈಕ್ಷಣಿಕ ಪ್ರಭಾವದ ಸೂಚಕಗಳನ್ನು ಆಧರಿಸಿ ವಿಶ್ವವಿದ್ಯಾಲಯವು ಈ ಪಟ್ಟಿಯನ್ನು ಸಿದ್ಧಪಡಿಸಿದೆ.

ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಹಾಗೂ ಅನ್ವಯಿಕ ಗಣಿತಶಾಸ್ತ್ರ ಕ್ಷೇತ್ರದಲ್ಲಿ ನಡೆಸಿರುವ ಗಮನಾರ್ಹ ಸಂಶೋಧನೆಗಳಿಗಾಗಿ ಡಾ. ಯೋಗೀಶ್ ಎನ್. ಅವರ ಹೆಸರು ಈ ಅಂತರರಾಷ್ಟ್ರೀಯ ದತ್ತಾಂಶದಲ್ಲಿ ಸೇರ್ಪಡೆಯಾಗಿದೆ. ಸಂಖ್ಯಾತ್ಮಕ ವಿಶ್ಲೇಷಣೆ, ಫಝಿ ವ್ಯವಸ್ಥೆಗಳು, ಅನಿಶ್ಚಿತತೆಯ ಗಣಿತೀಯ ಮಾದರೀಕರಣ ಹಾಗೂ ಆಪ್ಟಿಮೈಸೇಶನ್ ವಿಷಯಗಳಲ್ಲಿ ಇವರು 94ಕ್ಕೂ ಹೆಚ್ಚು ಸಂಶೋಧನಾ ಪ್ರಕಟಣೆಗಳನ್ನು ಹೊರತಂದಿದ್ದಾರೆ.

ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆಯಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು, ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶೈಕ್ಷಣಿಕ ಹಾಗೂ ಬೋಧನಾ ಜವಾಬ್ದಾರಿಗಳ ಜೊತೆಗೆ ನಿರಂತರವಾಗಿ ಉನ್ನತ ಮಟ್ಟದ ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕರೊಬ್ಬರು ಜಾಗತಿಕ ಮಟ್ಟದ ಈ ಅತ್ಯುನ್ನತ ಗೌರವಕ್ಕೆ ಪಾತ್ರರಾಗಿರುವುದು ಜಿಲ್ಲೆಗೆ ಹಾಗೂ ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಹೆಮ್ಮೆಯ ವಿಷಯವಾಗಿದೆ.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
LATEST
ಸ್ಟ್ರೀಂಗ್ ಆಪರೇಷನ್ ಕೋಲಾಹಲ: ಡಿಕೆಶಿ ಸ್ಟಿಂಗ್ ಸಾಮ್ರಾಟ್, ಸಿಎಂ ಸಿದ್ದರಾಮಯ್ಯ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪಡಾ. ಸುಧಾ ಯಾದವ್ ನಾಳೆ ಕರ್ನಾಟಕದ ನೂತನ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕಾರಮನೆಯಲ್ಲೇ ಕುಳಿತು ಕೇವಲ 5 ನಿಮಿಷದಲ್ಲಿ ರೇಷನ್ ಕಾರ್ಡ್ ಇ-ಕೆವೈಸಿ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿಎಚ್‌ಡಿ ಕುಮಾರಸ್ವಾಮಿ ಬಾಂಬ್‌: ಸ್ಟಿಂಗ್‌ ಆಪರೇಷನ್‌ ಕೇಸಲ್ಲಿ ನನ್ನನ್ನೂ ಫಿಕ್ಸ್‌ ಮಾಡುವ ಸಂಚು ನಡೆದಿತ್ತು! ಕರುನಾಡಿನ 'ಅಪ್ಪು' ಅಗಲಿದ ದುಃಖ ಇಂದಿಗೂ ಮಾಸಿಲ್ಲ: ಅಂತಿಮ ಕ್ಷಣಗಳ ಬಗ್ಗೆ ವೈದ್ಯ ಡಾ. ರಮಣ ರಾವ್ ಬಿಚ್ಚಿಟ್ಟ ಮರ್ಮ!2027ಕ್ಕೆ ಚಿನ್ನದ ಬೆಲೆ ರೂ. 2.82 ಲಕ್ಷ ದಾಟುತ್ತಾ? ಬಾಬಾ ವಂಗಾ ಹೆಸರಿನಲ್ಲಿ ವೈರಲ್ ಆಗಿರುವ ಭವಿಷ್ಯದ ಅಸಲಿಯತ್ತು ಏನು?ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ: ಇಂದಿರಾ ಗಾಂಧಿ ಪಿಂಚಣಿ ಯೋಜನೆಗಳ ಮರುನಾಮಕರಣ, ದಿವ್ಯಾಂಗರ ಪಿಂಚಣಿ ಮಾನದಂಡ ಸಡಿಲಿಕೆಕೆಪಿಎಸ್‌ಸಿ ಅಕ್ರಮ: ಕಿಂಗ್‌ಪಿನ್‌ ಬಸವರಾಜ್‌ ಕನ್ನಾಳೆಗೆ 5 ದಿನಗಳ ಷರತ್ತುಬದ್ಧ ಜಾಮೀನು ಮಂಜೂರುಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ನಿಧನ: ಹೃದಯಾಘಾತಕ್ಕೆ ರಕ್ತ ಹೆಪ್ಪುಗಟ್ಟುವಿಕೆಯೇ ಕಾರಣ ಎಂದ ಮರಣೋತ್ತರ ವರದಿರಾಜಸ್ಥಾನದಲ್ಲಿ ಭೀಕರ ಘರ್ಷಣೆ: ಬಿಜೆಪಿ ಮಾಜಿ ಶಾಸಕನನ್ನು ಹೊಡೆದು ಕೊಂದ ಗ್ರಾಮಸ್ಥರು