Press ID & Credential Portal
Apply / Verify  ➔
Stories
Press ID
Login
LIVE TV StateNationalInternationalBusinessLifestyleJobs
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ರಾಜಸ್ಥಾನದಲ್ಲಿ ಭೀಕರ ಘರ್ಷಣೆ: ಬಿಜೆಪಿ ಮಾಜಿ ಶಾಸಕನನ್ನು ಹೊಡೆದು ಕೊಂದ ಗ್ರಾಮಸ್ಥರು

ಜೈಪುರ: ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಭೋಂಡಾ ಗ್ರಾಮದಲ್ಲಿ ನಡೆದ ಭೀಕರ ಘರ್ಷಣೆಯಲ್ಲಿ ಬಿಜೆಪಿ ಮಾಜಿ ಶಾಸಕರೊಬ್ಬರು ಗ್ರಾಮಸ್ಥರ ಹಲ್ಲೆಗೆ ಸಿಲುಕಿ ದುರಂತವಾಗಿ ಮೃತಪಟ್ಟಿದ್ದಾರೆ. ಹರಿಯಾಣ ಮೂಲದ ಮಾಜಿ ಶಾಸಕ ಅಟರ್ ಸಿಂಗ್ ಭದಾನಾ ಮೃತಪಟ್ಟ ದುರ್ದೈವಿಯಾಗಿದ್ದು, ಈ ಘಟನೆಯಲ್ಲಿ ಅವರ ಅಂಗರಕ್ಷಕ ಗಗನ್ ಶರ್ಮಾ ಕೂಡ ತೀವ್ರವಾಗಿ ಗಾಯಗೊಂಡಿದ್ದಾರೆ.

ಭೋಂಡಾ ಗ್ರಾಮದ ಸಮೀಪವಿರುವ ತಮ್ಮ ಗಣಿಗಾರಿಕೆ ಗುತ್ತಿಗೆ ಪ್ರದೇಶಕ್ಕೆ ಅಟರ್ ಸಿಂಗ್ ಭದಾನಾ ಅವರು ತೆರಳಿದ್ದ ವೇಳೆ ಈ ಅನಾಹುತ ಸಂಭವಿಸಿದೆ. ಅಲ್ಲಿ ಜಮಾಯಿಸಿದ ನೂರಾರು ಗ್ರಾಮಸ್ಥರು ಬಡಿಗೆಗಳು ಮತ್ತು ಕಲ್ಲುಗಳಿಂದ ಅವರ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಭದಾನಾ ಅವರನ್ನು ತಕ್ಷಣವೇ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಜೈಪುರಕ್ಕೆ ರವಾನಿಸಲಾಗಿತ್ತು. ಆದರೆ, ಜೈಪುರದ ಸವಾಯಿ ಮಾನ್ ಸಿಂಗ್ ಆಸ್ಪತ್ರೆಯಲ್ಲಿ ಅವರು ಮಧ್ಯರಾತ್ರಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಮೃತ ಅಟರ್ ಸಿಂಗ್ ಭದಾನಾ ಅವರು ಭೋಂಡಾ ಗ್ರಾಮದ ಬೆಟ್ಟಗಳ ಸಮೀಪ ಗಣಿಗಾರಿಕೆ ಗುತ್ತಿಗೆ ಮತ್ತು ಕ್ರಷರ್ ಘಟಕವನ್ನು ಹೊಂದಿದ್ದರು. ಈ ಗಣಿಗಾರಿಕೆ ಗುತ್ತಿಗೆಯು ಅವರ ಪತ್ನಿ ಕಮಲೇಶ್ ಭದಾನಾ ಅವರ ಹೆಸರಿನಲ್ಲಿತ್ತು. ಆದರೆ, ಈ ಗಣಿಗಾರಿಕೆ ಚಟುವಟಿಕೆಗಳು ಹಾಗೂ ಕ್ರಷರ್ ಘಟಕದಿಂದ ಪರಿಸರ ಮತ್ತು ಜನಜೀವನಕ್ಕೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಭೋಂಡಾ ಮತ್ತು ರಾಯ್‌ಪುರ ಗ್ರಾಮಗಳ ನಿವಾಸಿಗಳು ಕಳೆದ ಎರಡು ವರ್ಷಗಳಿಂದ ನಿರಂತರ ಪ್ರತಿಭಟನೆ ನಡೆಸುತ್ತಿದ್ದರು. ಹಲವು ಬಾರಿ ಧರಣಿ ನಡೆಸಿದ್ದಲ್ಲದೆ, ಗಣಿಗಾರಿಕೆ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನೂ ತಡೆದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸುದೀರ್ಘ ವೈಷಮ್ಯವೇ ಕೊನೆಯಲ್ಲಿ ಭೀಕರ ಹತ್ಯೆಯಲ್ಲಿ ಅಂತ್ಯಗೊಂಡಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
LATEST
ಕೆಪಿಎಸ್‌ಸಿ ಅಕ್ರಮ: ಕಿಂಗ್‌ಪಿನ್‌ ಬಸವರಾಜ್‌ ಕನ್ನಾಳೆಗೆ 5 ದಿನಗಳ ಷರತ್ತುಬದ್ಧ ಜಾಮೀನು ಮಂಜೂರುಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ನಿಧನ: ಹೃದಯಾಘಾತಕ್ಕೆ ರಕ್ತ ಹೆಪ್ಪುಗಟ್ಟುವಿಕೆಯೇ ಕಾರಣ ಎಂದ ಮರಣೋತ್ತರ ವರದಿರಾಜಸ್ಥಾನದಲ್ಲಿ ಭೀಕರ ಘರ್ಷಣೆ: ಬಿಜೆಪಿ ಮಾಜಿ ಶಾಸಕನನ್ನು ಹೊಡೆದು ಕೊಂದ ಗ್ರಾಮಸ್ಥರು25 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲು ಸಿದ್ಧ: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಬಿ. ವೈ. ವಿಜಯೇಂದ್ರ ಬಾಂಬ್!ಮೈಸೂರು ದಸರಾ: ರಾಜಪರಂಪರೆಯ ವೈಭವದ ಪ್ರತೀಕವಾದ ರತ್ನಖಚಿತ ಸಿಂಹಾಸನದ ಇತಿಹಾಸ ಮತ್ತು ರೋಚಕ ವೈಶಿಷ್ಟ್ಯಗಳುಹವಾಮಾನ ವರದಿ: ರಾಜ್ಯದಲ್ಲಿ ಮುಂಗಾರು ಕ್ಷೀಣ; ಅಕ್ಟೋಬರ್ 13ರವರೆಗೆ ಮಳೆಯಿಲ್ಲದೆ ಬಿಸಿಲು, ಒಣಹವೆ ಮುಂದುವರಿಕೆStanford–Elsevier ವಿಶ್ವದ ಅಗ್ರ 2% ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರು ಸರ್ಕಾರಿ ಕಾಲೇಜಿನ ಗಣಿತ ಪ್ರಾಧ್ಯಾಪಕ ಡಾ. ಯೋಗೀಶ್ ಎನ್.ಪ್ರಜ್ವಲ್ ರೇವಣ್ಣ ಹಿಂಡಲಗಾ ಜೈಲಿಗೆ ಸ್ಥಳಾಂತರ ತಾತ್ಕಾಲಿಕ ಸ್ಥಗಿತ: ಡಿಜಿಪಿ ಅಲೋಕ್ ಕುಮಾರ್ ನಿರ್ಧಾರಬೆಂಗಳೂರಿನಲ್ಲಿ ಅಕ್ಕಸಾಲಿಗನಿಗೆ 1.3 ಕೋಟಿ ರೂ. ವಂಚನೆ: ದೈವಿಕ ಕೃಪೆಯ ಚಿನ್ನದ ಆಸೆಗೆ ಬಿದ್ದು ಸರ್ವಸ್ವ ಕಳೆದುಕೊಂಡ ಕುಟುಂಬಶರನ್ನವರಾತ್ರಿ ವಿಶೇಷ: ದೇಶದ ಪ್ರಸಿದ್ಧ ಒಂಬತ್ತು ದೈವಿಕ ದೇವಾಲಯಗಳು ಮತ್ತು ಅವುಗಳ ಆಧ್ಯಾತ್ಮಿಕ ಮಹತ್ವ