Press ID & Credential Portal
Apply / Verify  ➔
Stories
Press ID
Login
LIVE TV StateNationalInternationalBusinessLifestyleJobs
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕೆಪಿಎಸ್‌ಸಿ ಅಕ್ರಮ: ಕಿಂಗ್‌ಪಿನ್‌ ಬಸವರಾಜ್‌ ಕನ್ನಾಳೆಗೆ 5 ದಿನಗಳ ಷರತ್ತುಬದ್ಧ ಜಾಮೀನು ಮಂಜೂರು

ಬೆಂಗಳೂರು: ಕೆಪಿಎಸ್‌ಸಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಬಸವರಾಜ್ ಕನ್ನಾಳೆಗೆ ಐದು ದಿನಗಳ ಕಾಲ ಜಾಮೀನು ನೀಡಿ ಹೈಕೋರ್ಟ್ ಆದೇಶ ಹೊರಡಿಸಿದೆ. ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರ ಪೀಠದಲ್ಲಿ ಈ ಅರ್ಜಿಯ ವಿಚಾರಣೆ ನಡೆದಿದ್ದು, ಆರೋಪಿ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದರು. ಬಸವರಾಜ್ ಕನ್ನಾಳೆ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, 12 ದಿನದ ಮಗುವಿನ ನಾಮಕರಣ ಕಾರ್ಯಕ್ರಮಕ್ಕಾಗಿ ಮಾನವೀಯತೆ ಆಧಾರದ ಮೇಲೆ ಒಂದು ವಾರ ಜಾಮೀನು ನೀಡುವಂತೆ ವಕೀಲರು ಕೋರಿದ್ದರು.

ಅರ್ಜಿಯನ್ನು ಪರಿಗಣಿಸಿದ ಕೋರ್ಟ್ ಅಕ್ಟೋಬರ್ 15ರಿಂದ 20ರವರೆಗೆ ಐದು ದಿನಗಳ ಕಾಲ ಜಾಮೀನು ಮಂಜೂರು ಮಾಡಿದೆ. ಈ ವೇಳೆ ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಲಾಗಿದ್ದು, ಬಸವರಾಜ್ ಕನ್ನಾಳೆಯನ್ನು ಪೊಲೀಸರು ಜೊತೆಯಲ್ಲಿಯೇ ಬೀದರ್‌ಗೆ ಕರೆದೊಯ್ಯಬೇಕು ಮತ್ತು ಕಾರ್ಯಕ್ರಮ ಮುಗಿದ ಬಳಿಕ ವಾಪಸ್ ಕರೆತರಬೇಕು. ಜಾಮೀನು ಅವಧಿಯಲ್ಲಿ ಮೊಬೈಲ್ ಬಳಸಲು ಅವಕಾಶವಿಲ್ಲ ಹಾಗೂ ಪೊಲೀಸರು ಇಲ್ಲದಿರುವಾಗಲೂ ಮೊಬೈಲ್ ಬಳಸುವಂತಿಲ್ಲ. ಅಲ್ಲದೆ, ಪೊಲೀಸರು ಕನ್ನಾಳೆ ಮನೆ ಹಾಗೂ ಆಸ್ಪತ್ರೆಗೆ ಹೋಗುವಂತಿಲ್ಲ ಮತ್ತು ಈ ಅವಧಿಯಲ್ಲಿ ಅವರು ಬೇರೆ ಯಾರನ್ನೂ ಭೇಟಿಯಾಗಬಾರದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಐದು ದಿನಗಳ ಒಳಗೆ ನಾಮಕರಣ ಕಾರ್ಯಕ್ರಮ ಮುಗಿಸಿ ಶರಣಾಗುವಂತೆ ಸೂಚಿಸಲಾಗಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
LATEST
ಕೆಪಿಎಸ್‌ಸಿ ಅಕ್ರಮ: ಕಿಂಗ್‌ಪಿನ್‌ ಬಸವರಾಜ್‌ ಕನ್ನಾಳೆಗೆ 5 ದಿನಗಳ ಷರತ್ತುಬದ್ಧ ಜಾಮೀನು ಮಂಜೂರುಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ನಿಧನ: ಹೃದಯಾಘಾತಕ್ಕೆ ರಕ್ತ ಹೆಪ್ಪುಗಟ್ಟುವಿಕೆಯೇ ಕಾರಣ ಎಂದ ಮರಣೋತ್ತರ ವರದಿರಾಜಸ್ಥಾನದಲ್ಲಿ ಭೀಕರ ಘರ್ಷಣೆ: ಬಿಜೆಪಿ ಮಾಜಿ ಶಾಸಕನನ್ನು ಹೊಡೆದು ಕೊಂದ ಗ್ರಾಮಸ್ಥರು25 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲು ಸಿದ್ಧ: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಬಿ. ವೈ. ವಿಜಯೇಂದ್ರ ಬಾಂಬ್!ಮೈಸೂರು ದಸರಾ: ರಾಜಪರಂಪರೆಯ ವೈಭವದ ಪ್ರತೀಕವಾದ ರತ್ನಖಚಿತ ಸಿಂಹಾಸನದ ಇತಿಹಾಸ ಮತ್ತು ರೋಚಕ ವೈಶಿಷ್ಟ್ಯಗಳುಹವಾಮಾನ ವರದಿ: ರಾಜ್ಯದಲ್ಲಿ ಮುಂಗಾರು ಕ್ಷೀಣ; ಅಕ್ಟೋಬರ್ 13ರವರೆಗೆ ಮಳೆಯಿಲ್ಲದೆ ಬಿಸಿಲು, ಒಣಹವೆ ಮುಂದುವರಿಕೆStanford–Elsevier ವಿಶ್ವದ ಅಗ್ರ 2% ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರು ಸರ್ಕಾರಿ ಕಾಲೇಜಿನ ಗಣಿತ ಪ್ರಾಧ್ಯಾಪಕ ಡಾ. ಯೋಗೀಶ್ ಎನ್.ಪ್ರಜ್ವಲ್ ರೇವಣ್ಣ ಹಿಂಡಲಗಾ ಜೈಲಿಗೆ ಸ್ಥಳಾಂತರ ತಾತ್ಕಾಲಿಕ ಸ್ಥಗಿತ: ಡಿಜಿಪಿ ಅಲೋಕ್ ಕುಮಾರ್ ನಿರ್ಧಾರಬೆಂಗಳೂರಿನಲ್ಲಿ ಅಕ್ಕಸಾಲಿಗನಿಗೆ 1.3 ಕೋಟಿ ರೂ. ವಂಚನೆ: ದೈವಿಕ ಕೃಪೆಯ ಚಿನ್ನದ ಆಸೆಗೆ ಬಿದ್ದು ಸರ್ವಸ್ವ ಕಳೆದುಕೊಂಡ ಕುಟುಂಬಶರನ್ನವರಾತ್ರಿ ವಿಶೇಷ: ದೇಶದ ಪ್ರಸಿದ್ಧ ಒಂಬತ್ತು ದೈವಿಕ ದೇವಾಲಯಗಳು ಮತ್ತು ಅವುಗಳ ಆಧ್ಯಾತ್ಮಿಕ ಮಹತ್ವ