Press ID & Credential Portal
Apply / Verify  ➔
Stories
Press ID
Login
LIVE TV StateNationalInternationalBusinessLifestyleJobs
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಬೆಂಗಳೂರು ರೇಸ್‌ಕೋರ್ಸ್ ರಸ್ತೆಯಲ್ಲಿ 60 ದಿನ ಸಂಚಾರ ಮಾರ್ಗ ಬದಲಾವಣೆ: ಸವಾರರಿಗೆ ಇಲ್ಲಿದೆ ಪರ್ಯಾಯ ಮಾರ್ಗಗಳ ಪೂರ್ಣ ಮಾಹಿತಿ

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವತಿಯಿಂದ ಕೈಗೆತ್ತಿಕೊಳ್ಳಲಾಗಿರುವ ವೈಟ್ ಟಾಪಿಂಗ್, ರಾಜಕಾಲುವೆ, ಒಳಚರಂಡಿ ಮಾರ್ಗಗಳ ನಿರ್ವಹಣೆ ಹಾಗೂ ಯುಟಿಲಿಟಿ ಕಾಮಗಾರಿಗಳ ಹಿನ್ನೆಲೆಯಲ್ಲಿ ರಾಜಧಾನಿಯ ಪ್ರಮುಖ ಮಾರ್ಗವಾದ ರೇಸ್‌ಕೋರ್ಸ್ ರಸ್ತೆಯಲ್ಲಿ ಮುಂದಿನ 60 ದಿನಗಳ ಕಾಲ ವಾಹನ ಸಂಚಾರದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಈ ಕುರಿತು ಬೆಂಗಳೂರು ಸಂಚಾರ ಪೊಲೀಸರು ಪ್ರಕಟಣೆ ಹೊರಡಿಸಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರ ಅನುಕೂಲಕ್ಕಾಗಿ ಕೆಲವು ರಸ್ತೆಗಳಲ್ಲಿ ಸಂಚಾರ ನಿಷೇಧಿಸಿ, ಪರ್ಯಾಯ ಮಾರ್ಗಗಳ ವ್ಯವಸ್ಥೆ ಕಲ್ಪಿಸಿದ್ದಾರೆ.

ಕಾಮಗಾರಿ ಹಿನ್ನೆಲೆಯಲ್ಲಿ ಶಿವಾನಂದ ಜಂಕ್ಷನ್‌ನಿಂದ ಮೌರ್ಯ ಜಂಕ್ಷನ್ ಕಡೆಗೆ ತೆರಳುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದರೊಂದಿಗೆ ರೇಸ್‌ಕೋರ್ಸ್ ರಸ್ತೆಯ ಟ್ರಿಲೈಟ್ ಜಂಕ್ಷನ್‌ನಿಂದ ಮೌರ್ಯ ಜಂಕ್ಷನ್ ಕಡೆಗೆ ತೆರಳುವ ವಾಹನಗಳ ಸಂಚಾರಕ್ಕೂ ತಡೆ ಒಡ್ಡಲಾಗಿದೆ.

ಸಂಚಾರ ಸುಗಮಗೊಳಿಸಲು ಹಲವು ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದ್ದು, ಸ್ಯಾಂಕಿ ರಸ್ತೆಯಲ್ಲಿ ಕೆ.ಆರ್. ಮಾರ್ಕೆಟ್ ಕಡೆಗೆ ಸಂಚರಿಸುವ ಬಿಎಂಟಿಸಿ, ಖಾಸಗಿ ಬಸ್‌ಗಳು ಹಾಗೂ ಭಾರೀ ಸರಕು ಸಾಗಾಣೆ ವಾಹನಗಳು ವಿಂಡ್ಸರ್ ಮ್ಯಾನರ್‌ನಿಂದ ನೇರವಾಗಿ ಎಲ್‌ಆರ್‌ಡಿಇ ಜಂಕ್ಷನ್ ಮಾರ್ಗವಾಗಿ ತೆರಳಿ, ಅಲ್ಲಿ ಬಲತಿರುವು ಪಡೆದು ಬಸವೇಶ್ವರ ಜಂಕ್ಷನ್ ಮುಖಾಂತರ ಸಾಗಬೇಕಿದೆ.

ಅದೇ ರೀತಿ, ಸ್ಯಾಂಕಿ ರಸ್ತೆಯಲ್ಲಿ ಮೆಜೆಸ್ಟಿಕ್ ಕಡೆಗೆ ತೆರಳುವ ಎಲ್ಲಾ ರೀತಿಯ ವಾಹನಗಳು ಕುಮಾರಕೃಪ ರಸ್ತೆಯ ಮೂಲಕ ಶಿವಾನಂದ ಸರ್ಕಲ್ ತಲುಪಿ, ಅಲ್ಲಿ ಬಲ ತಿರುವು ಪಡೆದು ನಂತರ ಎಸ್.ಸಿ ರಸ್ತೆಯಲ್ಲಿ ಎಡತಿರುವು ಪಡೆದು ತಮ್ಮ ಗಮ್ಯಸ್ಥಾನ ಸೇರಬಹುದು.

ಇನ್ನು ಹಳೆ ಜೆಡಿಎಸ್ ಜಂಕ್ಷನ್‌ನಿಂದ ಟ್ರಿಲೈಟ್ ಜಂಕ್ಷನ್ ಕಡೆಗೆ ತೆರಳುವ ವಾಹನಗಳು ಹಳೆ ಜೆಡಿಎಸ್ ಜಂಕ್ಷನ್‌ನಲ್ಲಿ ಎಡಭಾಗದ ರಸ್ತೆಯಲ್ಲಿ ಸಾಗಿ, ರೇಸ್‌ವ್ಯೂ ಜಂಕ್ಷನ್‌ನಲ್ಲಿ ಎಡತಿರುವು ಪಡೆದು ಕುಮಾರ ಕೃಪ ರಸ್ತೆಯ ಮೂಲಕ ಶಿವಾನಂದ ಜಂಕ್ಷನ್ ಕಡೆಗೆ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.

ಮತ್ತೊಂದೆಡೆ, ಟ್ರಿಲೈಟ್ ಜಂಕ್ಷನ್‌ನಿಂದ ಮೌರ್ಯ ಜಂಕ್ಷನ್ ಕಡೆಗೆ ಹೋಗುವ ವಾಹನಗಳು ಶಿವಾನಂದ ಮೇಲ್ಸೇತುವೆ ಮೇಲೆ ನೇರವಾಗಿ ಚಲಿಸಿ, ನೆಹರು ಸರ್ಕಲ್‌ನಿಂದ ಎಸ್.ಸಿ ರಸ್ತೆಯನ್ನು ತಲುಪಿ ಮೆಜೆಸ್ಟಿಕ್ ಕಡೆಗೆ ತೆರಳಬಹುದಾಗಿದೆ.

ಮುಂದಿನ ಎರಡು ತಿಂಗಳ ಕಾಲ ಈ ತಾತ್ಕಾಲಿಕ ಸಂಚಾರ ಮಾರ್ಪಾಡುಗಳು ಜಾರಿಯಲ್ಲಿರಲಿದ್ದು, ನಗರದ ಸಂಚಾರ ನಿರ್ವಹಣೆಗೆ ಅನುಕೂಲವಾಗುವಂತೆ ವಾಹನ ಸವಾರರು ಹಾಗೂ ಸಾರ್ವಜನಿಕರು ಪೋಲಿಸ್ ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಬೆಂಗಳೂರು ಸಂಚಾರ ಪೊಲೀಸರು ವಿನಂತಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
LATEST
ಪ್ರಧಾನಿ ಮೋದಿ 25 ವರ್ಷಗಳ ಆಡಳಿತ ಪೂರೈಕೆ: ಶುಭಕೋರಿದ ಜಾಗತಿಕ ನಾಯಕರುಅಕ್ಕಿ ದರ ಸತತ ಹೆಚ್ಚಳ: ರಾಜ್ಯದ ಜನತೆಗೆ ಮತ್ತೆ ಬೆಲೆ ಏರಿಕೆ ಬಿಸಿ, ಅಡುಗೆ ಮನೆ ಬಜೆಟ್ ಅಸ್ತವ್ಯಸ್ತಹೆಚ್ಚುತ್ತಿರುವ ತಾಪಮಾನ: ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಎದುರಾಗಿದೆ ದೊಡ್ಡ ಗಂಡಾಂತರಅತಿಯಾದ ಸ್ಮಾರ್ಟ್‌ಫೋನ್ ಬಳಕೆ: ಯುವಕರ ಆರೋಗ್ಯದ ಮೇಲೆ ಬೀರುತ್ತಿದೆ ಗಂಭೀರ ಪರಿಣಾಮ - 'ದಿ ಲ್ಯಾನ್ಸೆಟ್' ಅಧ್ಯಯನ ಬಹಿರಂಗಫ್ರಿಡ್ಜ್‌ನಲ್ಲಿ ಈ ಹಣ್ಣುಗಳನ್ನಿಟ್ಟರೆ ರುಚಿ, ಪೌಷ್ಟಿಕಾಂಶ ಖಾಲಿಯಾಗೋದು ಖಂಡಿತ: ಕೋಣೆಯ ಉಷ್ಣಾಂಶದಲ್ಲೇ ಇಡಲು ತಜ್ಞರ ಪ್ರಮುಖ ಸಲಹೆಸಾರ್ವಜನಿಕ ಜೀವನಕ್ಕೆ 25 ವರ್ಷ: ನವದೆಹಲಿಯ ಶ್ರೀ ವಿನಾಯಕ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪ್ರಾರ್ಥನೆಬೆಂಗಳೂರು ರೇಸ್‌ಕೋರ್ಸ್ ರಸ್ತೆಯಲ್ಲಿ 60 ದಿನ ಸಂಚಾರ ಮಾರ್ಗ ಬದಲಾವಣೆ: ಸವಾರರಿಗೆ ಇಲ್ಲಿದೆ ಪರ್ಯಾಯ ಮಾರ್ಗಗಳ ಪೂರ್ಣ ಮಾಹಿತಿಆರ್‌ಬಿಐ ನೀತಿ ಪ್ರಕಟಣೆಗೂ ಮುನ್ನ ಕುಸಿತ ಕಂಡ ಷೇರು ಮಾರುಕಟ್ಟೆ: ಸೆನ್ಸೆಕ್ಸ್ 460 ಅಂಕ, ನಿಫ್ಟಿ 165 ಅಂಕ ಧರಾಶಾಹಿನಂದಿನಿ ಹಾಲು, ಬಸ್‌ ದರ ಏರಿಕೆಗೆ ಅಸ್ತು: ದೀಪಾವಳಿ ವೇಳೆಗೆ ಜನಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ?ಹ್ರಸ್ವಾವಧಿ ಬಡ್ಡಿದರ ಶೇ. 5.50 ಕ್ಕೆ ಏರಿಕೆ : ಆರ್‌ಬಿಐನಿಂದ ಮಾನಿಟರಿ ಪಾಲಿಸಿ ಬಿಗಿಗೊಳಿಸುವ ಕ್ರಮ