ಹೊಟೇಲ್ ರೂಮ್ ಗಳಲ್ಲಿ ಹಿಡನ್ ಕ್ಯಾಮೆರಾಗಳ ಹಾವಳಿ
ಹಿಡನ್ ಕ್ಯಾಮೆರಾ ಇಡುವ ಸಾಮಾನ್ಯ ಜಾಗಗಳು ಕೊಠಡಿಯೊಳಗೆ ಹೋದ ತಕ್ಷಣ ಫ್ಲವರ್ ಪಾಟ್ ಮತ್ತು ಫೋಟೋ ಫ್ರೇಮ್ಗಳನ್ನು ಸೂಕ್ಷ್ಮವಾಗಿ ಗಮನಿಸಿ. ಇವುಗಳು ಕ್ಯಾಮೆರಾ ಅಡಗಿಸಿಡಲು ಅತಿ ಸುಲಭವಾದ ಜಾಗಗಳಾಗಿವೆ.
ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ನಿಗಾ ಟಿವಿ ಸೆಟ್-ಟಾಪ್ ಬಾಕ್ಸ್, ಎಸಿ ವೆನ್ಟ್ಗಳು ಮತ್ತು ಸ್ಮೋಕ್ ಡಿಟೆಕ್ಟರ್ಗಳಲ್ಲಿ ಗುಪ್ತ ಕ್ಯಾಮೆರಾಗಳನ್ನು ಸುಲಭವಾಗಿ ಅಳವಡಿಸಿರುತ್ತಾರೆ. ಎಲೆಕ್ಟ್ರಾನಿಕ್ ವಸ್ತುಗಳ ಬಳಿ ಸಣ್ಣ ರಂಧ್ರಗಳಿದ್ದರೆ ಎಚ್ಚರವಹಿಸಿ.
ಬಾತ್ ರೂಮ್ ಮತ್ತು ಟ್ರಯಲ್ ರೂಮ್ ಶೌಚಾಲಯದ ಶವರ್, ಲೈಟ್ ಹೋಲ್ಡರ್ ಹಾಗೂ ಟ್ರಯಲ್ ರೂಮ್ ಗೋಡೆಗಳ ಮೂಲೆಗಳನ್ನು ಕಡ್ಡಾಯವಾಗಿ ಪರೀಕ್ಷಿಸಿ. ಇಲ್ಲಿಯೇ ಹೆಚ್ಚು ಖಾಸಗಿ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತದೆ.
ಫ್ಲ್ಯಾಶ್ಲೈಟ್ ತಂತ್ರ ಕೊಠಡಿಯ ಎಲ್ಲಾ ದೀಪಗಳನ್ನು ಆರಿಸಿ ಮೊಬೈಲ್ ಫ್ಲ್ಯಾಶ್ಲೈಟ್ ಆನ್ ಮಾಡಿ. ಅನುಮಾನವಿರುವ ವಸ್ತುಗಳ ಮೇಲೆ ಬೆಳಕು ಹಾಯಿಸಿದಾಗ ಕ್ಯಾಮೆರಾ ಲೆನ್ಸ್ ಇದ್ದರೆ ಅದು ಗಾಜಿನಂತೆ ಹೊಳೆಯುತ್ತದೆ.
ಸ್ಮಾರ್ಟ್ಫೋನ್ ಕ್ಯಾಮೆರಾ ಬಳಕೆ ಕತ್ತಲೆಯಲ್ಲಿ ನಿಮ್ಮ ಮೊಬೈಲ್ ಕ್ಯಾಮೆರಾ ಆನ್ ಮಾಡಿ ಸ್ಕ್ಯಾನ್ ಮಾಡಿ. ಪರದೆಯ ಮೇಲೆ ಸಣ್ಣ ನೇರಳೆ ಅಥವಾ ಬಿಳಿ ಬಣ್ಣದ ಚುಕ್ಕೆ ಕಂಡರೆ ಅಲ್ಲಿ ಇನ್ಫ್ರಾರೆಡ್ ಕ್ಯಾಮೆರಾ ಇದೆ ಎಂದರ್ಥ.
ಕನ್ನಡಿ ಪರೀಕ್ಷೆ ವಿಧಾನ ಕನ್ನಡಿಯ ಮೇಲೆ ನಿಮ್ಮ ಬೆರಳು ಇಟ್ಟು ಪರೀಕ್ಷಿಸಿ. ನಿಮ್ಮ ಬೆರಳು ಮತ್ತು ಕನ್ನಡಿಯೊಳಗಿನ ಪ್ರತಿಬಿಂಬದ ನಡುವೆ ಅಂತರವಿಲ್ಲದೆ ಒಂದಕ್ಕೊಂದು ತಾಗಿದಂತೆ ಇದ್ದರೆ, ಅದು ಟೂ-ವೇ ಕನ್ನಡಿ ಆಗಿರಬಹುದು.
ವೈ-ಫೈ ನೆಟ್ವರ್ಕ್ ಪರಿಶೀಲನೆ ಇಂದಿನ ಬಹುತೇಕ ಹಿಡನ್ ಕ್ಯಾಮೆರಾಗಳು ವೈ-ಫೈ ಮೂಲಕ ಸಂಪರ್ಕ ಹೊಂದಿರುತ್ತವೆ. ನಿಮ್ಮ ಮೊಬೈಲ್ನಲ್ಲಿ ವೈ-ಫೈ ಆನ್ ಮಾಡಿ ಅಪರಿಚಿತ ಅಥವಾ ವಿಚಿತ್ರ ಹೆಸರಿನ ಡಿವೈಸ್ಗಳು ಇವೆಯೇ ಎಂದು ನೋಡಿ.
ಕ್ಯಾಮೆರಾ ಪತ್ತೆಯಾದರೆ ಹೀಗೆ ಮಾಡಿ ಗುಪ್ತ ಕ್ಯಾಮೆರಾ ಕಂಡುಬಂದರೆ ಅದನ್ನು ಮುಟ್ಟಲು ಅಥವಾ ಒಡೆಯಲು ಹೋಗಬೇಡಿ. ಇದು ಸಾಕ್ಷ್ಯನಾಶ ಮಾಡಿದಂತೆ ಆಗುತ್ತದೆ, ಆದ್ದರಿಂದ ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ.
ಜಾಗೃತಿ ಮೂಡಿಸಿ ಪ್ರತಿಯೊಬ್ಬರ ಖಾಸಗಿತನ ಮತ್ತು ಸುರಕ್ಷತೆ ಅತ್ಯಂತ ಮಹತ್ವದ್ದಾಗಿದೆ. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರು, ಕುಟುಂಬದವರು ಹಾಗೂ ಪರಿಚಯಸ್ಥರೊಂದಿಗೆ ಹಂಚಿಕೊಳ್ಳಿ ಮತ್ತು ಸುರಕ್ಷಿತವಾಗಿರಿ.