Press ID & Credential Portal
Apply / Verify  ➔
Stories
Press ID
Login
LIVE TV StateNationalInternationalBusinessLifestyleJobs
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

HDK VS DK Shivakumar: 'ನನ್ನ ಬಳಿ ₹1,400 ಕೋಟಿ ಆಸ್ತಿ ಇದೆ, ತಪ್ಪೇನು?': ಹೆಚ್‌ಡಿಕೆ ನೈಸ್ ಆರೋಪಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು

ನವದೆಹಲಿ/ಬೆಂಗಳೂರು: ಇಂದಿನ ಮೌಲ್ಯದಲ್ಲಿ ನನ್ನ ಬಳಿ 1,400 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ. ನಾನು ಕಾನೂನು ಚೌಕಟ್ಟಿನಲ್ಲೇ ಆಸ್ತಿ ಸಂಪಾದಿಸಿದ್ದೇನೆ. ಉದ್ಯಮಿಯಾದ ನನಗೆ ಹಾಗೂ ನನ್ನ ಮಕ್ಕಳಿಗೆ ಆಸ್ತಿ ಮಾಡಲು ಕಾನೂನಿನಲ್ಲಿ ಅವಕಾಶವಿದೆ," ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಆರೋಪಗಳಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.
ದ

ಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಲ್ಲಿ ಬಿರುಕು ಉಂಟಾಗಿದ್ದು, 'ತಾ ಮುಂದು ನಾ ಮುಂದು' ಎಂಬ ಪೈಪೋಟಿಯಲ್ಲಿ ಕುಮಾರಸ್ವಾಮಿ ಹತಾಶರಾಗಿ ಹೀಗೆ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.  

ಕುಮಾರಸ್ವಾಮಿ ಐಟಿ ಅಧಿಕಾರಿಯೇ?: ಡಿಕೆಶಿ ಪ್ರಶ್ನೆ   "ನಾನೊಬ್ಬ ರೈತನ ಮಗ, ಉದ್ಯಮಿಯಾದ ನನಗೆ ಆಸ್ತಿ ಇರಬಾರದೇ? ನನ್ನ ಮಕ್ಕಳು ಆಸ್ತಿ ಕೊಂಡುಕೊಳ್ಳಬಾರದೇ? ಕುಮಾರಸ್ವಾಮಿ ಅವರೇನು ಆದಾಯ ತೆರಿಗೆ ಅಧಿಕಾರಿಯೇ? ಅವರಿಗೆ ಅನುಮಾನವಿದ್ದರೆ ಐಟಿ ಇಲಾಖೆಗೆ ಮಾಹಿತಿ ನೀಡಲಿ," ಎಂದು ಸವಾಲು ಹಾಕಿದರು.ಶೋಭಾ ಡೆವಲಪರ್ಸ್ ಜೊತೆಗಿನ ಹೂಡಿಕೆ ಆರೋಪಕ್ಕೆ ಉತ್ತರಿಸಿದ ಅವರು, "ದಿ. ಬಂಗಾರಪ್ಪ ಅವರ ಅವಧಿಯಲ್ಲಿ ನಾನು ಲಕ್ಷ ರೂಪಾಯಿಗೆ ಖರೀದಿಸಿದ್ದ ನಿವೇಶನದ ಬೆಲೆ ಇಂದು 20 ಕೋಟಿ ರೂ. ಆಗಿದೆ. ಆಸ್ತಿ ಮೌಲ್ಯ ಹೆಚ್ಚಾದರೆ ಅದರಲ್ಲಿ ತಪ್ಪೇನಿದೆ? ನಾನು ಲಂಚ ಪಡೆದಿದ್ದೇನಾ ಅಥವಾ ಯಾವುದಾದರೂ ಹಗರಣದಲ್ಲಿ ಸಿಕ್ಕಿಬಿದ್ದಿದ್ದೇನಾ? ನಾನು ಕದ್ದುಮುಚ್ಚಿ ಏನನ್ನೂ ಮಾಡಿಲ್ಲ, ಪ್ರತಿಯೊಂದನ್ನೂ ಚುನಾವಣಾ ಆಯೋಗ ಮತ್ತು ಇಡಿಗೆ ಘೋಷಿಸಿಕೊಂಡಿದ್ದೇನೆ" ಎಂದರು.

ವಿಧಾನಸೌಧದ ಒಳಗಡೆ ಬಂದು ಚರ್ಚಿಸಲಿ   ಕುಮಾರಸ್ವಾಮಿ ಅವರ ವಿಧಾನಸೌಧದ ಮೆಟ್ಟಿಲುಗಳ ಮೇಲಿನ ಚರ್ಚೆಯ ಸವಾಲಿಗೆ ಪ್ರತಿಕ್ರಿಯಿಸಿ, "ಧೈರ್ಯವಿದ್ದರೆ ಯಾರನ್ನಾದರೂ ಕೌನ್ಸಿಲ್ ಅಥವಾ ಅಸೆಂಬ್ಲಿ ಸದಸ್ಯತ್ವಕ್ಕೆ ರಾಜೀನಾಮೆ ಕೊಡಿಸಿ, ಶಾಸಕರಾಗಿ ಅಸೆಂಬ್ಲಿ ಒಳಗಡೆ ಬಂದು ಚರ್ಚೆ ಮಾಡಲಿ. ಇಲ್ಲವೇ ಫ್ರೀಡಂ ಪಾರ್ಕ್‌ಗೆ ಹೋಗಿ ಚರ್ಚಿಸಲಿ. ಇಂತಹ ಗೊಡ್ಡು ಬೆದರಿಕೆ, ಬ್ಲ್ಯಾಕ್‌ಮೇಲ್ ಹಾಗೂ ಫೋನ್ ಟ್ಯಾಪಿಂಗ್ ತಂತ್ರಗಳಿಗೆ ಡಿ.ಕೆ. ಶಿವಕುಮಾರ್ ಹೆದರುವುದಿಲ್ಲ," ಎಂದು ಸ್ಪಷ್ಟಪಡಿಸಿದರು.ಸ್ವಂತ ಅಪ್ಪ, ಅಣ್ಣ-ತಮ್ಮಂದಿರನ್ನೇ ಜೀರ್ಣಿಸಿಕೊಳ್ಳದವರು!   "ಸ್ವಂತ ಅಪ್ಪ ಹಾಗೂ ಅಣ್ಣ-ತಮ್ಮಂದಿರನ್ನೇ ಜೀರ್ಣಿಸಿಕೊಳ್ಳಲಾಗದವರು ನಮ್ಮನ್ನು ಬಿಡುತ್ತಾರೆಯೇ? ನಮ್ಮ ಸರ್ಕಾರದ ಜನಪ್ರಿಯತೆಯನ್ನು ತಡೆದುಕೊಳ್ಳಲು ಆಗದೇ ಅಸೂಯೆಯಿಂದ ಹೀಗೆ ಮಾಡುತ್ತಿದ್ದಾರೆ. ಕಸ ಹೊಡೆದು ಸಂಪಾದಿಸಿದ ಹಣ ನನ್ನ ಬಳಿ ಇಲ್ಲ.

ನನ್ನದೇ ಆದ ವೃತ್ತಿ-ವ್ಯವಹಾರವಿದೆ," ಎಂದು ವಾಗ್ದಾಳಿ ನಡೆಸಿದರು.   ಯತೀಂದ್ರ ಮೇಲಿನ ದೂರು ಸಂಪೂರ್ಣ ಸುಳ್ಳು   ಶಾಸಕ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿರುವ ದೂರಿನ ಕುರಿತು ಕೇಳಿದಾಗ, "ಅವರು ಹುದ್ದೆಗೆ ಬಂದು ಕೆಲವು ತಿಂಗಳುಗಳಷ್ಟೇ ಆಗಿದೆ, ಅಷ್ಟರಲ್ಲೇ 444 ಕೋಟಿ ಅಕ್ರಮ ಮಾಡಲು ಸಾಧ್ಯವೇ? ಅದೆಲ್ಲವೂ ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ," ಎಂದು ತಳ್ಳಿಹಾಕಿದರು.ದೆಹಲಿಯಲ್ಲಿ ಶಿಕ್ಷಣ ನೀತಿ ಕುರಿತು ಪ್ರಮುಖ ಸಭೆ   ತಮ್ಮ ದೆಹಲಿ ಪ್ರವಾಸದ ಬಗ್ಗೆ ವಿವರಣೆ ನೀಡಿದ ಅವರು, "ದಕ್ಷಿಣ ಭಾರತದ ರಾಜ್ಯಗಳ ಶಿಕ್ಷಣ ನೀತಿ ಹಾಗೂ ಪರೀಕ್ಷಾ ಅಕ್ರಮಗಳನ್ನು ತಡೆಯುವ ಕುರಿತು ಹೈಕಮಾಂಡ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಮಹತ್ವದ ಸಭೆ ನಡೆಸಲಾಗಿದೆ. KPSC ಸೇರಿದಂತೆ ಎಲ್ಲಾ ಪರೀಕ್ಷೆಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಯು.ಟಿ. ಖಾದರ್ ನೇತೃತ್ವದ ಸಚಿವ ಸಂಪುಟ ಉಪಸಮಿತಿ ಮೂಲಕ ಸುಧಾರಣೆ ತರಲು ಬದ್ಧರಾಗಿದ್ದೇವೆ," ಎಂದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
LATEST
ಕೆಪಿಎಸ್‌ಸಿ ಅಕ್ರಮ: ಕಿಂಗ್‌ಪಿನ್‌ ಬಸವರಾಜ್‌ ಕನ್ನಾಳೆಗೆ 5 ದಿನಗಳ ಷರತ್ತುಬದ್ಧ ಜಾಮೀನು ಮಂಜೂರುಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ನಿಧನ: ಹೃದಯಾಘಾತಕ್ಕೆ ರಕ್ತ ಹೆಪ್ಪುಗಟ್ಟುವಿಕೆಯೇ ಕಾರಣ ಎಂದ ಮರಣೋತ್ತರ ವರದಿರಾಜಸ್ಥಾನದಲ್ಲಿ ಭೀಕರ ಘರ್ಷಣೆ: ಬಿಜೆಪಿ ಮಾಜಿ ಶಾಸಕನನ್ನು ಹೊಡೆದು ಕೊಂದ ಗ್ರಾಮಸ್ಥರು25 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲು ಸಿದ್ಧ: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಬಿ. ವೈ. ವಿಜಯೇಂದ್ರ ಬಾಂಬ್!ಮೈಸೂರು ದಸರಾ: ರಾಜಪರಂಪರೆಯ ವೈಭವದ ಪ್ರತೀಕವಾದ ರತ್ನಖಚಿತ ಸಿಂಹಾಸನದ ಇತಿಹಾಸ ಮತ್ತು ರೋಚಕ ವೈಶಿಷ್ಟ್ಯಗಳುಹವಾಮಾನ ವರದಿ: ರಾಜ್ಯದಲ್ಲಿ ಮುಂಗಾರು ಕ್ಷೀಣ; ಅಕ್ಟೋಬರ್ 13ರವರೆಗೆ ಮಳೆಯಿಲ್ಲದೆ ಬಿಸಿಲು, ಒಣಹವೆ ಮುಂದುವರಿಕೆStanford–Elsevier ವಿಶ್ವದ ಅಗ್ರ 2% ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರು ಸರ್ಕಾರಿ ಕಾಲೇಜಿನ ಗಣಿತ ಪ್ರಾಧ್ಯಾಪಕ ಡಾ. ಯೋಗೀಶ್ ಎನ್.ಪ್ರಜ್ವಲ್ ರೇವಣ್ಣ ಹಿಂಡಲಗಾ ಜೈಲಿಗೆ ಸ್ಥಳಾಂತರ ತಾತ್ಕಾಲಿಕ ಸ್ಥಗಿತ: ಡಿಜಿಪಿ ಅಲೋಕ್ ಕುಮಾರ್ ನಿರ್ಧಾರಬೆಂಗಳೂರಿನಲ್ಲಿ ಅಕ್ಕಸಾಲಿಗನಿಗೆ 1.3 ಕೋಟಿ ರೂ. ವಂಚನೆ: ದೈವಿಕ ಕೃಪೆಯ ಚಿನ್ನದ ಆಸೆಗೆ ಬಿದ್ದು ಸರ್ವಸ್ವ ಕಳೆದುಕೊಂಡ ಕುಟುಂಬಶರನ್ನವರಾತ್ರಿ ವಿಶೇಷ: ದೇಶದ ಪ್ರಸಿದ್ಧ ಒಂಬತ್ತು ದೈವಿಕ ದೇವಾಲಯಗಳು ಮತ್ತು ಅವುಗಳ ಆಧ್ಯಾತ್ಮಿಕ ಮಹತ್ವ