ಮಧುಮೇಹದ ಈ ಲಕ್ಷಣಗಳ ಬಗ್ಗೆ ನಿಮಗಿದೆಯೇ ಎಚ್ಚರ?

ಇಡೀ ಜಗತ್ತಿನಲ್ಲಿ ವೇಗವಾಗಿ ಹರಡುತ್ತಿರುವ ಮಧುಮೇಹದ ಆರಂಭಿಕ ಲಕ್ಷಣಗಳನ್ನು ಇಲ್ಲಿ ತಿಳಿಯಿರಿ.

ಸದಾ ಸುಸ್ತು ಮತ್ತು ಆಯಾಸ

ಸರಿಯಾಗಿ ನಿದ್ರೆ ಮಾಡಿದ ನಂತರವೂ ನೀವು ಸುಸ್ತಾಗಿದ್ದರೆ, ಅದು ರಕ್ತದಲ್ಲಿನ ಸಕ್ಕರೆ ಹೆಚ್ಚಳದ ಸಂಕೇತವಾಗಿರಬಹುದು.

ಪದೇ ಪದೇ ಮೂತ್ರ ವಿಸರ್ಜನೆ ದೇಹದಲ್ಲಿನ ಹೆಚ್ಚಿನ ಸಕ್ಕರೆಯನ್ನು ಹೊರಹಾಕಲು ಮೂತ್ರಪಿಂಡಗಳು ಶ್ರಮಿಸುತ್ತವೆ, ಇದರಿಂದ ಪದೇ ಪದೇ ಶೌಚಾಲಯಕ್ಕೆ ಹೋಗಬೇಕಾಗಬಹುದು.

ಅತಿಯಾದ ಬಾಯಾರಿಕೆ ಮೂತ್ರದ ಮೂಲಕ ನೀರು ಹೊರಹೋಗುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗಿ ವಿಪರೀತ ಬಾಯಾರಿಕೆ ಉಂಟಾಗುತ್ತದೆ.

ದೃಷ್ಟಿ ಮಂದವಾಗುವುದು ಮಧುಮೇಹವು ಕಣ್ಣಿನ ರೆಟಿನಾದ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ನಿರ್ಲಕ್ಷಿಸಿದರೆ ದೃಷ್ಟಿ ಪೂರ್ಣ ನಷ್ಟವಾಗುವ ಅಪಾಯವಿದೆ.

ತೂಕದಲ್ಲಿ ಇಳಿಕೆ ಯಾವುದೇ ವ್ಯಾಯಾಮ ಅಥವಾ ಡಯಟ್ ಮಾಡದಿದ್ದರೂ ಇದ್ದಕ್ಕಿದ್ದಂತೆ ತೂಕ ಕಡಿಮೆಯಾಗುತ್ತಿದ್ದರೆ ಎಚ್ಚರವಹಿಸಿ.

ಪದೇ ಪದೇ ಹಸಿವಾಗುವುದು ಊಟ ಮಾಡಿದ ತಕ್ಷಣ ಮತ್ತೆ ಹಸಿವಾಗುತ್ತಿದ್ದರೆ, ಅದು ದೇಹದಲ್ಲಿ ಇನ್ಸುಲಿನ್ ಸರಿಯಾಗಿ ಕೆಲಸ ಮಾಡದಿರುವುದರ ಲಕ್ಷಣ.

ಗಾಯಗಳು ಒಣಗಲು ವಿಳಂಬ ಚಿಕ್ಕ ಪುಟ್ಟ ಗಾಯಗಳು ಅಥವಾ ಹುಣ್ಣುಗಳು ಬೇಗನೆ ವಾಸಿಯಾಗದಿದ್ದರೆ ಮಧುಮೇಹ ಪರೀಕ್ಷೆ ಮಾಡಿಸಿಕೊಳ್ಳಿ.

ಪದೇ ಪದೇ ಅನಾರೋಗ್ಯ ರೋಗನಿರೋಧಕ ಶಕ್ತಿ ಕುಸಿಯುವುದರಿಂದ ಸಣ್ಣ ಪುಟ್ಟ ಸೋಂಕುಗಳು ನಿಮ್ಮನ್ನು ಪದೇ ಪದೇ ಕಾಡಬಹುದು.

ಚರ್ಮದ ಬಣ್ಣ ಬದಲಾವಣೆ ಕತ್ತಿನ ಹಿಂಭಾಗ, ಕಂಕುಳು ಅಥವಾ ಕಣ್ಣಿನ ಸುತ್ತ ಚರ್ಮ ಕಪ್ಪಾಗುವುದು ಮಧುಮೇಹದ ಪ್ರಮುಖ ಲಕ್ಷಣ.

ಮುಖದ ಮೇಲೆ ಮೊಡವೆ ರಕ್ತದಲ್ಲಿ ಸಕ್ಕರೆ ಮಟ್ಟ ಏರಿದಾಗ ಚರ್ಮದ ಮೇಲೆ ಮೊಡವೆಗಳು ಮತ್ತು ಕಲೆಗಳು ಕಾಣಿಸಿಕೊಳ್ಳಬಹುದು.

ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ ಇಂತಹ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ.